ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದ್ದು ತ್ಯಾಜ್ಯ ಘಟಕಕ್ಕೆ ಒಂದು ಎಕರೆ ಜಮೀನು,ಆಟದ ಮೈದಾನಕ್ಕೆ ಎರಡು ಎಕರೆ,ನಿವೇಶನಕ್ಕೆ ಮೂರು ಎಕರೆ ಹಾಗೂ ಒಂದೂವರೆ ಎಕರೆ ಜಮೀನು ಸಾರ್ವಜನಿಕ ಸ್ಮಶಾನ ನಿರ್ಮಾಣಕ್ಕೆ ಮಂಜೂರಾಗಿದ್ದು ಡಿಸೆಂಬರ್ ಅಂತ್ಯದೊಳಗೆ ಯೋಜನೆ ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುವುದು ಎಂದು ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ಹೇಳಿದರು.
ಮುನ್ನೂರು ಗ್ರಾಮ ಪಂಚಾಯತ್ ನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಯಾವುದೇ ಗ್ರಾಮ ಅಭಿವೃದ್ಧಿ ಆಗಬೇಕಾದರೆ ಗ್ರಾಮದ ಸಹಕಾರ ಅಗತ್ಯ, ಅಂತಹ ಸಹಕಾರ ಮುನ್ನೂರು ಗ್ರಾಮಸ್ಥರಿಂದ ಸಿಕ್ಕಿದ್ದು ಪಂಚಾಯತ್ ಅಭಿವೃದ್ಧಿ ಕಾಣುವಂತಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಸಭಾಭವನ,ಡಿಜಿಟಲ್ ಗ್ರಂಥಾಲಯ, ಕೊಳವೆ ಬಾವಿ ,ಸೋಲಾರ್ ಸಂಪರ್ಕ,ಅಮೃತ ಉದ್ಯಾನವನ,ಮದನಿನಗರ ಅಂಗನವಾಡಿ ಕಟ್ಟಡ, ಸಾರ್ವಜನಿಕ ಶೌಚಗೃಹ ಉದ್ಘಾಟನೆ ಹಾಗೂ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನಡೆಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ,ಅಭಿವೃದ್ಧಿ ಅಧಿಕಾರಿ ರವೀಂದ್ರ ರಾಜೀವ ನಾಯಕ್, ಮಾಜಿ ಶಾಸಕರಾದ ಜಯರಾಮ ಶೆಟ್ಟಿ, ಶಕುಂತಲಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು
Kshetra Samachara
14/07/2022 11:48 am