ಬೈಂದೂರು: ಉಡುಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರದ ಕುಡಿಯುವ ನೀರಿನ ಯೋಜನೆಗೆ ಸಂಬಂಧಪಟ್ಟಂತೆ ಅಧಿಕಾರಿಗಳ ಸಭೆ ಹೆಮ್ಮಾಡಿಯಲ್ಲಿ ನಡೆಯಿತು. 550 ಕೋಟಿ ರುಪಾಯಿ ವೆಚ್ಚದಲ್ಲಿ 2 ಕ್ಲಸ್ಟರ್ ಮಾಡಲಾಗಿದ್ದು, ಆರಂಭದಲ್ಲಿ 60 ಸಾವಿರ ಮನೆಗಳಿಗೆ ಕುಡಿಯುವ ನೀರು ತಲುಪಿಸುವ ಯೋಜನೆ ಇದಾಗಿದೆ. ಭವಿಷ್ಯದ ದೃಷ್ಟಿಯಿಂದ 71 ಸಾವಿರ ಮನೆಗಳಿಗೆ ನೀರು ಒದಗಿಸುವ ಯೋಜನೆ ಇದಾಗಿದ್ದು ಇಂದು ಸಂಸದ ಬಿ.ವೈ ರಾಘವೇಂದ್ರ, ಶಾಸಕ ಸುಕುಮಾರ ಶೆಟ್ಟಿ ನೇತೃತ್ವದಲ್ಲಿಅಧಿಕಾರಿಗಳ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ ವರಾಹಿ ಡ್ಯಾಂ ಮತ್ತು ಗುಲ್ವಾಡಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ನೀರು ಪೂರೈಸಲಾಗುವುದು. ವಿಧಾನಸಭಾ ಕ್ಷೇತ್ರದಲ್ಲಿ 220 ಟ್ಯಾಂಕ್ ನಿರ್ಮಾಣವಾಗಲಿದೆ ಎಂದರು 2 ವರ್ಷದಲ್ಲಿ ಕೆಲಸ ಪೂರ್ಣ ಮಾಡ್ತೇವೆ ಎಂದರು. ಶಾಸಕ ಸುಕುಮಾರ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಐದು ನದಿಗಳು ಹರಿದು ಸಮುದ್ರ ಸೇರಿದರೂ ಬೇಸಿಗೆಯಲ್ಲಿ ಟ್ಯಾಂಕರ್ ನೀರು ಕುಡಿಯುವ ಸ್ಥಿತಿ ಇದೆ. ಆದ್ಯತೆ ಮೇರೆಗೆ ಬೈಂದೂರಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಯೋಜನೆ ರೂಪಿಸಿ ಹಣ ಬಿಡುಗಡೆ ಮಾಡಿದೆ. ತಾಲೂಕಿನಲ್ಲಿ ಉಪ್ಪು ನೀರಿಗೆ ತಡೆಯೊಡ್ಡುವ ಉದ್ದೇಶದಿಂದ ಅಲ್ಲಲ್ಲಿ 110 ಕೋಟಿ ವೆಚ್ಚದಲ್ಲಿ ವೆಂಟೆಂಡ್ ಡ್ಯಾಂ ನಿರ್ಮಿಸುತ್ತೇವೆ ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಸಿಇಒ ನವೀನ್ ಭಟ್, ಎಸಿ ಕೆ, ರಾಜು, ಬೈಂದೂರು ತಹಶಿಲ್ದಾರ್ ಬಸಪ್ಪ ಪೂಜಾರ್, ಕುಂದಾಪುರ ತಾ.ಪಂ ಇಒ ಕೇಶವ ಶೆಟ್ಟಿಗಾರ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡರು.
Kshetra Samachara
24/11/2020 05:59 pm