ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲ್ಲೂರು: ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಗ್ರಾಪಂ ಪಕ್ಕದಲ್ಲೇ ಬೆಂಕಿ; ಗ್ರಾಮಸ್ಥರ ಆಕ್ರೋಶ

ಕಾಪು: ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಗ್ರಾ.ಪಂ. ಪಕ್ಕದಲ್ಲೇ ಬೆಂಕಿ ಇಕ್ಕುವ ಮೂಲಕ ಕಾಪು ತಾಲೂಕಿನ ಎಲ್ಲೂರು ಗ್ರಾಪಂ, ಗ್ರಾಮದ ಜನರಿಗೆ ಮಾರಕ ರೋಗಭೀತಿ ಸೃಷ್ಟಿಸುತ್ತಿದೆ ಎಂದು ಸ್ಥಳೀಯ ನಿವಾಸಿ ಲಕ್ಷ್ಮೀನಾರಾಯಣ ಎಂಬವರು ಗ್ರಾಪಂ ಅಧಿಕಾರಿಗಳ ನಡೆ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾ.ಪಂ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮನೆಮನೆಗಳಿಂದ ಸಂಗ್ರಹ ಮಾಡುವ ತ್ಯಾಜ್ಯವನ್ನು ಗ್ರಾ.ಪಂ. ಹಿಂಭಾಗದ ತ್ಯಾಜ್ಯ ಗುಂಡಿಗೆ ಸುರಿದು ಬೆಂಕಿ ಇಡುತ್ತಿದ್ದಾರೆ. ನಲವತ್ತಕ್ಕೂ ಅಧಿಕ ವಾಸದ ಮನೆಗಳಿರುವ ಈ ಭಾಗದಲ್ಲಿ ನೂರಕ್ಕೂ ಅಧಿಕ ಮಕ್ಕಳು, ಹಿರಿಯರು ವಾಸಿಸುತ್ತಿದ್ದಾರೆ. ತ್ಯಾಜ್ಯ ಗುಂಡಿಯಿಂದ ಹೊರ ಬರುವ ಹೊಗೆ ಪರಿಸರಕ್ಕೆ ಹಾನಿ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಡಿಒ ಮಮತಾ ಶೆಟ್ಟಿ, ನಾವು ಮನೆಮನೆಗಳಿಂದ ಸಂಗ್ರಹ ಮಾಡುವ ತ್ಯಾಜ್ಯವನ್ನು ಜನರು ಒಣಗಿಸದೆ ನೀಡುವುದರಿಂದ ನಾವು ಅನಿವಾರ್ಯ ವಾಗಿ ಅದನ್ನು ಸುಡುವಂತಾಗಿದೆ ಎನ್ನುವ ಮೂಲಕ ತನ್ನ ಜವಾಬ್ದಾರಿ ಮರೆತು ಮಾತನಾಡಿರುವುದು ಜನರನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.

Edited By : Manjunath H D
Kshetra Samachara

Kshetra Samachara

12/11/2020 02:30 pm

Cinque Terre

21.47 K

Cinque Terre

2

ಸಂಬಂಧಿತ ಸುದ್ದಿ