ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೃಷಿ ಅಭಿಯಾನ 2022-23ರ ಕೃಷಿ ಮಾಹಿತಿ ರಥಕ್ಕೆ ಚಾಲನೆ

ಮುಲ್ಕಿ: ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ನೇತೃತ್ವದಲ್ಲಿ ಸಮಗ್ರ ಕೃಷಿ ಅಭಿಯಾನ 2022ರ ಅಂಗವಾಗಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದ "ಕೃಷಿ ಮಾಹಿತಿ ರಥದ ಮೂಲಕ "ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ" ಜಾಥಾಕ್ಕೆ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ನಿಂದ ಚಾಲನೆ ನೀಡಲಾಯಿತು.

ಜಾಥಾಗೆ ಚಾಲನೆ ನೀಡಿದ ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷ ಮನೋಹರ ಕೋಟ್ಯಾನ್ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರ ಕೃಷಿಗೆ ಪ್ರೋತ್ಸಾಹ ನೀಡುತ್ತಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕೃಷಿ ಅಧಿಕಾರಿ ಅಬ್ದುಲ್ ಬಷೀರ್ ಸರಕಾರದಿಂದ ಕೃಷಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭ ಪಂಚಾಯತ್ ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ಪದ್ಮಿನಿ ಶೆಟ್ಟಿ, ಜ್ಯೋತಿ ಆಚಾರ್ಯ, ಮಾಜಿ ಸದಸ್ಯ ಹರೀಶ್ ಶೆಟ್ಟಿ, ಕೃಷಿಕರಾದ ರತ್ನಾಕರ ಮಂದಾಡಿ, ವಿಜಯ ಶೆಟ್ಟಿ, ವಸಂತ ಕೆ.ಅಮೀನ್ ನಡಿ ಕೊಪ್ಪಲ,ಕೃಷಿ ಸಹಾಯಕ ಅಧಿಕಾರಿ ಷಣ್ಮುಖ ಮತ್ತಿತರರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

22/06/2022 01:15 pm

Cinque Terre

4.19 K

Cinque Terre

0

ಸಂಬಂಧಿತ ಸುದ್ದಿ