ಕಾಪು : ಎರ್ಮಾಳು ಪಡುಬಿದ್ರಿ ಗಡಿಭಾಗ ರಾಷ್ಟ್ರೀಯ ಹೆದ್ದಾರಿ 66ರ ಕಿರು ಸೇತುವೆ ಬಳಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ನೀರು ಶೇಖರಣೆಗೊಂಡು ಅಪಘಾತ ಸಂಭವಿಸುತ್ತಿದ್ದು, ಅದಕ್ಕೆ ಅವೈಜ್ಞಾನಿಕವಾಗಿಯೆ ತೇಪೆ ಹಾಕಿದ್ದರ ಪರಿಣಾಮ ಸಮಸ್ಯೆ ಜೀವಂತವಿದ್ದು ಮತ್ತೆ ಅಪಘಾತ ಸರಣಿ ಮುಂದುವರೆದಿದೆ.
ರಾಷ್ಟ್ರೀಯ ಹೆದ್ದಾರಿ ಚತುರ್ಷಥ ಕಾಮಗಾರಿ ನಡೆದ ದಿನದಿಂದ ಮಳೆ ನೀರು ಹರಿದು ಹೋಗದೆ ರಸ್ತೆಯಲ್ಲೇ ಶೇಖರಣೆ ಗೊಳ್ಳುತ್ತಿದ್ದು, ಅದರ ಮೇಲೆ ಚಲಿಸಿದ ವಾಹನಗಳು ಗಾಜಿಗೆ ನೀರು ಎರಚಿಸಿಗೊಂಡು ನಿಯಂತ್ರಣ ತಪ್ಪಿ ರಸ್ತೆ ವಿಭಜಕವೇರಿ ಕೆಲವು ಪಲ್ಟಿ ಹೊಡೆದರೆ, ಕೆಲವು ಜಖಂಗೊಂಡು ನಿಲ್ಲುತ್ತಿದೆ.
ಈ ಸಮಸ್ಯೆ ಗಮನಕ್ಕೆ ಬಂದ ಇಲಾಖೆ ಮತ್ತೆ ಇದಕ್ಕೆ ರಸ್ತೆ ವಿಭಜಕದ ಮೇಲೆಯೇ ಚರಂಡಿ ನಿರ್ಮಿಸುವ ಮೂಲಕ ಅವೈಜ್ಞಾನಿವಾಗಿಯೇ ಪರಿಹಾರ ನಡೆಸಿದ್ದರ ಪರಿಣಾಮ ಮತ್ತೆ ರಸ್ತೆಯಲ್ಲಿ ನೀರು ನಿಂತು ಅಪಘಾತ ಸರಣಿ ಮುಂದುವರೆದಿದೆ.
ಈ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡುವಂತೆ ಹೆದ್ದಾರಿ ಇಲಾಖೆಯನ್ನು ಜನ ಆಗ್ರಹಿಸಿದ್ದಾರೆ.
Kshetra Samachara
19/05/2022 11:06 pm