ಕುಂದಾಪುರ: ತಾಲೂಕಿನ ಅಂಪಾರಿನಲ್ಲಿ ತಾಲೂಕು ಪಂಚಾಯತ್ ರಾಜ್ ಒಕ್ಕೂಟ, ಕರ್ನಾಟಕ ರಾಜ್ಯ ಗ್ರಾಪಂ ಹಕ್ಕೊತ್ತಾಯ ಆಂದೋಲನ ವತಿಯಿಂದ ಸರಣಿ ಸತ್ಯಾಗ್ರಹ ನಡೆಯಿತು. ವಂಡ್ಸೆ ಗ್ರಾಪಂ ವ್ಯಾಪ್ತಿಯಲ್ಲಿದ್ದ ಸ್ವಾವಲಂಬಿ ಹೊಲಿಗೆ ತರಬೇತಿ ಕೇಂದ್ರ ತೆರವು ಖಂಡಿಸಿ, ನಡೆದ ಪ್ರತಿಭಟನೆ ಸಭೆಯಲ್ಲಿ ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಕೊರೊನಾ ಸಂದರ್ಭ ಪ್ರಧಾನಿಯವರ ಆತ್ಮ ನಿರ್ಭರ್ ಘೋಷಣೆಗೆ ತದ್ವಿರುದ್ಧವಾಗಿ ವಂಡ್ಸೆ ಪಂ. ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪಂಚಾಯತ್ ರಾಜ್ ನಿಯಮದ ವಿರುದ್ಧವಾಗಿ ರಾತ್ರೋರಾತ್ರಿ ಸ್ವಾವಲಂಬಿ ಮಹಿಳೆಯರನ್ನು ಹೊರ ದಬ್ಬುವ ಕಾರ್ಯ ಮಾಡಲಾಗಿದೆ. ಇದನ್ನು ನಾನು ಖಂಡಿಸುತ್ತೇನೆ ಎಂದರು.
ಸ್ಥಳೀಯ ಮುಖಂಡರು, ನಾನಾ ಸಂಘಟನೆಗಳ ಮುಂದಾಳು ಗಳು ಉಪಸ್ಥಿತರಿದ್ದರು.
Kshetra Samachara
24/10/2020 03:49 pm