ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮಳೆಗಾಲದ ಪ್ರವಾಹ ರಕ್ಷಣಾ ತಂಡದಿಂದ ಬೋಟ್ ಇಂಜಿನ್ ಕಾರ್ಯಕ್ಷಮತೆ ಪರೀಕ್ಷೆ

ಮುಲ್ಕಿ: ಗೃಹ ರಕ್ಷಕದಳದಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಮುಲ್ಕಿ ತಹಶೀಲ್ದಾರ್ ಮಾರ್ಗದರ್ಶನದಲ್ಲಿ ನಗರ ಪಂಚಾಯತ್ ಸಹಕಾರದೊಂದಿಗೆ ಮಳೆಗಾಲದ ಪ್ರವಾಹ ರಕ್ಷಣಾ ತಂಡವು ಮುಲ್ಕಿ ಶಾಂಭವಿ ನದಿಯಲ್ಲಿ ಇನ್ ಪ್ಲೇ ಟೇಬಲ್ ಬೋಟ್ ಹಾಗೂ, ಬೋಟ್ ಇಂಜಿನ್ ಕಾರ್ಯಕ್ಷಮತೆ ಪರೀಕ್ಷಿಸಲಾಯಿತು.

ಈ ಸಂದರ್ಭ ಮುಲ್ಕಿ ತಹಶೀಲ್ದಾರ್ ಟಿ. ಜಿ ಗುರುಪ್ರಸಾದ್ ಅವರು ಪ್ರವಾಹ ಸಂದರ್ಭದಲ್ಲಿ ಪಾಲಿಸಬೇಕಾದ ಮುನ್ನಚ್ಚರಿಕೆ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಲ್ಕಿ ಹೋಬಳಿ ಕಂದಾಯ ನಿರೀಕ್ಷಕ ಜಿ. ಎಸ್ ದಿನೇಶ್, ಸ್ಥಳೀಯ ನಗರ ಪಂಚಾಯತಿ ಸದಸ್ಯೆ ದಯಾವತಿ, ಗ್ರಹ ರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಲೋಕೇಶ್ ಚಿತ್ರಾಪು, ಪ್ರವಾಹ ರಕ್ಷಣಾ ತಂಡದ ಸದಸ್ಯರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಭಾಗವಹಿಸಿದ್ದರು.

Edited By : Somashekar
Kshetra Samachara

Kshetra Samachara

13/06/2022 06:45 pm

Cinque Terre

14.3 K

Cinque Terre

1

ಸಂಬಂಧಿತ ಸುದ್ದಿ