ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಶಿಥಿಲಾವಸ್ಥೆಯಲ್ಲಿ ಶಾಲೆ ಕಟ್ಟಡ, ಪ್ರಾಣಭೀತಿ! ; ಮಕ್ಕಳು, ಶಿಕ್ಷಕರ ಅಳಲು

ಪುತ್ತೂರು: ದ.ಕ. ಜಿಲ್ಲೆ ಪುತ್ತೂರಿನ ಭಕ್ತಕೋಡಿಯಲ್ಲಿರುವ ಈ ಸರಕಾರಿ ಶಾಲೆ ಮಕ್ಕಳು ಇಂದೋ-ನಾಳೆಯೋ ಧರೆಗುರುಳಲು ಸಿದ್ಧವಾಗಿ ನಿಂತ ಕಟ್ಟಡದಲ್ಲೇ ಪಾಠ ಕೇಳಬೇಕಾದ ದುಸ್ಥಿತಿಯಲ್ಲಿದ್ದಾರೆ. ಗ್ರಾಮಾಂತರದ ಈ ಶಾಲೆಗೆ ಬಡ ಕುಟುಂಬಗಳ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದು, ಪ್ರಾಣ ಕೈಯಲ್ಲಿ ಹಿಡಿದೇ ಕೂರಬೇಕಾಗಿದೆ. ಈ ಬಗ್ಗೆ ಶಿಕ್ಷಣಾಧಿಕಾರಿ ಸಹಿತ ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ.

53 ವರ್ಷಗಳ ಇತಿಹಾಸವಿರುವ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಗುಣಮಟ್ಟದ ಶಿಕ್ಷಣ ನೀಡುವ ಸರಕಾರಿ ಶಾಲೆಯೆಂಬ ಹೆಸರೂ ಇದೆ. ಆದರೆ, ಶಾಲೆಯ ಮೇಲ್ಫಾವಣಿ ಮರದ ರೀಪುಗಳು ಕರಗಿ ಹೋಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ.

ಗೋಡೆಗಳ ನಡುವೆ ಭಾರಿ ಬಿರುಕು ಕಾಣಿಸಿಕೊಂಡಿದ್ದು, 4 ಗೋಡೆಗಳಿಗೂ ಪರಸ್ಪರ ಸಂಬಂಧವೇ ಇಲ್ಲದಂತಾಗಿದೆ! ಇಲ್ಲಿ 4 ತರಗತಿಗಳಿದ್ದು, ಒಟ್ಟು 130 ಮಕ್ಕಳು ಕಲಿಯುತ್ತಿದ್ದಾರೆ. ಮಳೆ- ಗಾಳಿ ಬಂದರೆ ಮಕ್ಕಳು, ಶಿಕ್ಷಕರು ತರಗತಿ ಬಿಟ್ಟು ಹೊರಗಡೆ ಓಡಿ ತಮ್ಮನ್ನು ರಕ್ಷಿಸಿಕೊಳ್ಳಬೇಕಾದ ಪರಿಸ್ಥಿತಿಯಿದೆ. ಮಳೆನೀರು ಸೋರುವ ಕಾರಣದಿಂದಾಗಿ ತರಗತಿಯಲ್ಲಿ ದೊಡ್ಡ ಗಾತ್ರದ ಪಾತ್ರೆಗಳನ್ನು ಇಡಬೇಕಾಗುತ್ತದೆ ಎನ್ನುತ್ತಾರೆ ಶಿಕ್ಷಕರು.

Edited By : Nagesh Gaonkar
Kshetra Samachara

Kshetra Samachara

09/01/2022 06:15 pm

Cinque Terre

18.05 K

Cinque Terre

1

ಸಂಬಂಧಿತ ಸುದ್ದಿ