ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ನೂರಾರು ಟೈಲರ್‌ಗಳಿಂದ ಪ್ರತಿಭಟನೆ

ಮಣಿಪಾಲ: ಹಲವು ಬೇಡಿಕೆಗಳನ್ನು ಮುಂದಿರಿಸಿ ಟೈಲರ್ಸ್ ಅಸೋಸಿಯೇಷನ್ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಮುಖ್ಯವಾಗಿ ಕ್ಷೇಮನಿಧಿ ಮಂಡಳಿ ರಚನೆ ಮೂಲಕ ಪಿಎಫ್, ಆರೋಗ್ಯ ವಿಮೆ ಜಾರಿಗೊಳಿಸಬೇಕು. ಇದುವರೆಗೆ ಹಣ ಸಂದಾಯ ಮಾಡಿದ 60 ವರ್ಷ ತುಂಬಿದ ಎಲ್ಲ ಎನ್‌ಪಿಎಸ್ ಲೈಟ್ ಫಲಾನುಭವಿಗಳ ನಿವೃತ್ತಿ ವೇತನ ಘೋಷಣೆ ಮಾಡಬೇಕು ಮತ್ತು ಮಾಸಿಕ ಕನಿಷ್ಠ 3,000 ರೂ. ನಿವೃತ್ತಿ ವೇತನ ನೀಡಬೇಕು. ಹೊಲಿಗೆ ಕೆಲಸಗಾರರ ಹೆಣ್ಣು ಮಕ್ಕಳಿಗೆ ವಿವಾಹಧನ ನೀಡಬೇಕು, ಹೆರಿಗೆ ಭತ್ಯೆ ನೀಡಬೇಕು, ಮನೆ ಕಟ್ಟಲು ಅಥವಾ ಪುನರ್ ನಿರ್ಮಾಣ ಮಾಡಲು ಧನ ಸಹಾಯ ಮತ್ತು ಕಡಿಮೆ ಬಡ್ಡಿಯ ಸಾಲ ನೀಡಬೇಕು. ಹೊಲಿಗೆ ಕೆಲಸಗಾರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ನೀಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಟೈಲರ್‌ಗಳು ಮುಂದಿಟ್ಟಿದ್ದಾರೆ. ಮಣಿಪಾಲದ ಟೈಗರ್ ಸರ್ಕಲ್‌ನಿಂದ ಪ್ರತಿಭಟನಾ ಮೆರವಣಿಗೆ ಮೂಲಕ ನೂರಾರು ಟೈಲರ್ ವೃತ್ತಿ ಬಾಂಧವರು ಡಿಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

Edited By :
Kshetra Samachara

Kshetra Samachara

27/07/2022 05:20 pm

Cinque Terre

7.78 K

Cinque Terre

3

ಸಂಬಂಧಿತ ಸುದ್ದಿ