ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಎನ್ಐಟಿಕೆ ವಿದ್ಯಾರ್ಥಿಗಳಿಂದ ತಯಾರಾಯ್ತು ಸ್ಪೆಷಲ್ ಡರ್ಟ್ ಇ-ಬೈಕ್

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಇಲೆಕ್ಟ್ರಿಕ್ ವಾಹನಗಳ ಬಗ್ಗೆ ಕ್ರೇಜ್ ಹೆಚ್ಚುತ್ತಿದೆ. ರಸ್ತೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಬ್ಯಾಟರಿ ಚಾಲಿತ ಇಲೆಕ್ಟ್ರಿಕ್ ವಾಹನಗಳು ಕಂಡು ಬರುತ್ತಿದೆ. ಆದರೆ ಮಂಗಳೂರಿನ ಎನ್ಐಟಿಕೆ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವೊಂದು ಇದೀಗ ಆಫ್ ರೋಡ್ ಸಾಮರ್ಥ್ಯದ ಇ-ಬೈಕ್ ಅನ್ನು ತಯಾರು ಮಾಡಿದೆ. ಈ ಬಗ್ಗೆ ವಿಶೇಷ ಸುದ್ದಿ ಇಲ್ಲಿದೆ.

ಹೌದು..ಸುರತ್ಕಲ್‌ನ ಎನ್.ಐ.ಟಿ.ಕೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇಲ್ಲಿನ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್‌ನಿಂದ ಸ್ಪೆಷಲ್ ಡರ್ಟ್ ಇ-ಬೈಕ್ ಅನ್ನು ತಯಾರು ಮಾಡಿದ್ದಾರೆ. ಆಫ್ ರೋಡ್‌ನಲ್ಲಿ ಸಂಚರಿಸಲೆಂದು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇದನ್ನು ಡಿಸೈನ್ ಮಾಡಿದ್ದಾರೆ. ಈ ಡರ್ಟ್ ಇ-ಬೈಕ್‌ ಅನ್ನು ಹಿಮಕುಸಿತ ವಲಯ, ಭೂಕುಸಿತ ಪ್ರದೇಶ ಹಾಗೂ ನೈಸರ್ಗಿಕ ವಿಕೋಪಗಳಿಗೆ ಒಳಗಾಗುವ ಸ್ಥಳಗಳಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ ಬಳಸಬಹುದು.

ನೋಡಲು ಸ್ಪೋರ್ಟ್ಸ್ ಬೈಕ್ ನಂತೆ ಕಾಣುವ ಈ ಡರ್ಟ್ ಇ-ಬೈಕ್ 1979ರ ಎನ್.ಐ.ಟಿ.ಕೆಯ ಹಿರಿಯ ವಿದ್ಯಾರ್ಥಿಗಳ ಹಣಕಾಸಿನ ನೆರವಿನಿಂದ ವಿನ್ಯಾಸಗೊಂಡಿದೆ. ಎಸ್ಇಜಿ ಆಟೋಮೋಟಿವ್ ಸಹಭಾಗಿತ್ವದಲ್ಲಿ ತಯಾರಿಸಲಾಗಿದೆ. ಇದನ್ನು ಬೆಟ್ಟ ಗುಡ್ಡಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಹಕರಿಸುವ ರೀತಿಯಲ್ಲಿ ತಯಾರಿಸವಾಗಿದೆ. ಆದ್ದರಿಂದ ಪವರ್‌ಫುಲ್ ಮೋಟಾರು ಬಳಕೆ ಮಾಡಲಾಗಿದೆ. 3-4 ಗಂಟೆಗಳಲ್ಲಿ ಫುಲ್ ಬ್ಯಾಟರಿ ಚಾರ್ಜ್ ಮಾಡಿದ್ದಲ್ಲಿ ಸುಮಾರು 40 ಕಿಲೋ ಮೀಟರ್‌ವರೆಗೆ ಓಡಿಸಬಹುದಾಗಿದೆ.

ಇದರ ನಿರ್ಮಾಣ ವೆಚ್ಚ ಸುಮಾರು 2 ಲಕ್ಷ ರೂ. ಆಗಿದ್ದು, ಮುಂದೆ ಇನ್ನಷ್ಟು ಪ್ರೋತ್ಸಾಹ ಲಭಿಸಿದ್ದಲ್ಲಿ ಇನ್ನಷ್ಟು ಅಭಿವೃದ್ಧಿಗೊಳಿಸಿ ತಯಾರಿಸುವ ಯೋಜನೆಯಿದೆ.ಸದ್ಯ ಮಾರುಕಟ್ಟೆಗೆ ಬಂದಿರುವ ಇ ದ್ವಿಚಕ್ರ ವಾಹನಗಳಲ್ಲಿ ಆಫ್ ರೋಡ್ ಸಾಮರ್ಥ್ಯದ ದ್ವಿಚಕ್ರ ವಾಹನ ಬಹು ಕಡಿಮೆ. ಹೀಗಾಗಿ ಎನ್.ಐ.ಟಿ.ಕೆ ಸುರತ್ಕಲ್‌ನ ವಿದ್ಯಾರ್ಥಿಗಳು ಅನ್ವೇಷಣೆ ಮಾಡಿರುವ ಈ ಡರ್ಟ್ ಇ-ಬೈಕ್‌ನ್ನು ಮೋಟಾರು ಕಂಪೆನಿಗಳು ಪಡೆದು ಅಭಿವೃದ್ದಿಗೊಳಿಸುವ ಸಾಧ್ಯತೆಯಿದೆ.

ಪಬ್ಲಿಕ್ ನೆಕ್ಸ್ಟ್ ವಿಶೇಷ ಸ್ಟೋರಿ: ವಿಶ್ವನಾಥ ಪಂಜಿಮೊಗರು

Edited By : Somashekar
PublicNext

PublicNext

31/12/2022 10:47 pm

Cinque Terre

39.41 K

Cinque Terre

1

ಸಂಬಂಧಿತ ಸುದ್ದಿ