ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಬಪ್ಪನಾಡು ಶ್ರೀ ಭಗವತಿ ದೇವಿಯ ನೂತನ ತಂಗುದಾಣದ ಉದ್ಘಾಟನಾ ಸಮಾರಂಭ

ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಜಾತ್ರಾ ಸಮಯದಲ್ಲಿ ಸಸಿಹಿತ್ಲು ಭಗವತಿ ದೇವಿಯು ಬಂದು ತಂಗುತ್ತಿರುವ ಶ್ರೀ ಭಗವತಿ ದೇವಿಯ ನೂತನ ತಂಗುದಾಣದ ಉದ್ಘಾಟನಾ ಸಮಾರಂಭವು ಸೋಮವಾರ ಸಂಜೆ ನಡೆಯಲಿದ್ದು ಪೂರ್ವಭಾವಿಯಾಗಿ ಭಾನುವಾರ ವಾಸ್ತು ಹೋಮ ಹಾಗೂ ಧಾರ್ಮಿಕ ವಿಧಿವಿಧಾನಗಳು ದೇವಳದ ಅರ್ಚಕ ಶ್ರೀಪತಿ ಉಪಾಧ್ಯಾಯ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭ ದಾನಿ ನಾರಾಯಣಶೆಟ್ಟಿ ಬೆಂಗಳೂರು ಮಾತನಾಡಿ ಬಪ್ಪನಾಡು ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಸಸಿಹಿತ್ಲು ವಿನಿಂದ ಬಂದು ತಂಗುತ್ತಿರುವ ಭಗವತಿ ದೇವಿ ತಂಗುದಾಣವು ಶಿಥಿಲಾವಸ್ಥೆಯಲ್ಲಿರುವುದನ್ನು ಮನಗಂಡು ನವೀಕರಣ ಮಾಡಲಾಗಿದೆ. ಸೋಮವಾರ ಉದ್ಘಾಟನಾ ಸಮಾರಂಭ ನಡೆಯಲಿದ್ದು ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಹಾಗೆಯೇ ಬಪ್ಪನಾಡು ದೇವಳದಲ್ಲಿ ಒಂಬತ್ತು ಮಾಗಣೆಯ ಭಕ್ತರ ಸಭೆಯನ್ನು ಕರೆಯಲಾಗಿದ್ದು ಎಲ್ಲರೂ ಭಾಗವಹಿಸಿ ಸಭೆಯನ್ನು ಚಂದ ಕಾಣಿಸಿ ಕೊಡಬೇಕೆಂದು ವಿನಂತಿಸಿದರು.

ಈ ಸಂದರ್ಭ ದೇವಳದ ಅನುವಂಶಿಕ ಮೊಕ್ತೇಸರ ಮೂಲ್ಕಿ ಸೀಮೆಯ ದುಗ್ಗಣ್ಣ ಸಾವಂತ ಅರಸರು, ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ, ಸಸಿಹಿತ್ಲು ಭಗವತಿ ದೇವಸ್ಥಾನದ ಅನುವಂಶಿಕ ಮುಕ್ತೇಸರರ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿಯ ಶೇಖರ ಶೆಟ್ಟಿ ಕಿಲ್ಪಾಡಿ ಬಂಡಸಾಲೆ,, ಮಹೀಮ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು

Edited By : Manjunath H D
Kshetra Samachara

Kshetra Samachara

21/02/2021 10:34 pm

Cinque Terre

8.88 K

Cinque Terre

0

ಸಂಬಂಧಿತ ಸುದ್ದಿ