ಕಡಬದ ಸಾರ್ವಜನಿಕ ರುದ್ರಭೂಮಿಯಲ್ಲಿ ಅರೆಸುಟ್ಟ ಸ್ಥಿತಿಯಲ್ಲಿ ಮೃತದೇಹವೊಂದು ಶನಿವಾರ ರಾತ್ರಿ ಕಂಡುಬಂದಿದೆ.
ಕಡಬ ಸಮೀಪದ ಗೋಳಿಯಡ್ಕ ನಿವಾಸಿಯೋರ್ವರು ಶನಿವಾರದಂದು ಮೃತಪಟ್ಟಿದ್ದು, ಕಡಬದ ರುದ್ರಭೂಮಿಯಲ್ಲಿ ದಹನ ಕಾರ್ಯ ಮಾಡಲಾಗಿತ್ತು. ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಮೃತದೇಹಕ್ಕೆ ಬೆಂಕಿ ಹಚ್ಚಿ ತೆರಳಿದ್ದರು ಎನ್ನಲಾಗಿದೆ. ಸಂಜೆ ವೇಳೆಗೆ ಸ್ಥಳೀಯ ಪರಿಸರದ ನಿವಾಸಿಗಳಿಗೆ ಸುಟ್ಟ ವಾಸನೆ ಬರಲಾರಂಭಿಸಿದ್ದು, ಸ್ಮಶಾನಕ್ಕೆ ತೆರಳಿ ನೋಡಿದಾಗ ಅರೆಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.ಈ ಸ್ಮಶಾನವನ್ನು ಇತ್ತಿಚೆಗೆ ಕೆಲವು ತಿಂಗಳುಗಳ ಹಿಂದೆ ಲಕ್ಷಗಟ್ಟಲೆ ಹಣ ವ್ಯಯಿಸುವ ಮೂಲಕ ಸಚಿವ ಎಸ್.ಅಂಗಾರ ಅವರ ಮುತುವರ್ಜಿಯಿಂದ ದುರಸ್ತಿ ಮಾಡಲಾಗಿತ್ತು.
ಆದರೆ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಜನರ ನಿಯೋಜನೆ ಮಾಡದೇ ಇರುವುದೇ ಇಂತಹ ಅವಾಂತರ ಆಗಲು ಕಾರಣ ಎಂಬುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.ಮರುದಿನ ಬೆಳಗ್ಗೆ ಮೃತದೇಹದ ಕೆಲವು ಭಾಗಗಳನ್ನು ನಾಯಿಗಳು ಕಟ್ಟಿಕೊಂಡು ಓಡಾಡುತ್ತಿತ್ತು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಒಟ್ಟಾರೆ ಮೃತದೇಹವೊಂದಕ್ಕೆ ಅಂತಿಮ ಕ್ಷಣದಲ್ಲಿ ಸಿಗುವ ಗೌರವವೂ ಸಿಗದಂತಾಗಿದೆ..
Kshetra Samachara
09/08/2021 04:55 pm