ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಷ್ಟ್ರಪಿತನ ಫೋಟೊ ಕಸದ ರಾಶಿಯಲ್ಲಿ!; ದುಷ್ಕೃತ್ಯ ವಿರುದ್ಧ ಆಕ್ರೋಶ

ಮಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪೋಟೊವನ್ನು ಕಸದ ರಾಶಿಯಲ್ಲಿ ಹಾಕಿ

ಅವಮಾನಿಸಲಾಗಿದೆ! ಅಕ್ಟೋಬರ್ 2 ರಂದು ದೇಶಾದ್ಯಂತ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ದುಷ್ಕರ್ಮಿಗಳು ಈ ಕುಕೃತ್ಯ ಎಸಗಿದ್ದಾರೆ.

ಕರ್ನಾಟಕಕ್ಕೆ 18ಕ್ಕೂ ಹೆಚ್ಚು ಬಾರಿ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ್ದಾರೆ. ಅದರಲ್ಲೂ ಕರಾವಳಿಯ ಮಂಗಳೂರು, ಉಡುಪಿಗೂ ಬಂದಿದ್ದಾರೆ. ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದ 2ನೇ ಪ್ರವೇಶ ದ್ವಾರದ ಸಿಕ್ ಲೈನ್ ರಿಕ್ಷಾ ನಿಲ್ದಾಣದ ಸಮೀಪದಲ್ಲಿ ಗಾಂಧೀಜಿ ಅವರ ಫೋಟೊವನ್ನು ಕಸ-ತ್ಯಾಜ್ಯ ರಾಶಿಯಲ್ಲಿ ಎಸೆಯಲಾಗಿದೆ.

ಇದೀಗ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ದುಷ್ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಾರ್ವಜನಿಕರು ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

Edited By : Somashekar
PublicNext

PublicNext

30/09/2022 03:09 pm

Cinque Terre

31.26 K

Cinque Terre

4

ಸಂಬಂಧಿತ ಸುದ್ದಿ