ಕುಂದಾಪುರ : ಆಲೂರು ಗ್ರಾಮದಲ್ಲಿ ನಡೆಯುತ್ತಿರುವ ಕೆಂಪುಕಲ್ಲು ಗಣಿ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ, ಕಂದಾಯ ಇಲಾಖೆ ಆರ್ ಐ, ಗ್ರಾಮ ಪಂಚಾಯಿತಿ ಅಧಿಕಾರಿಗಳು ದಾಳಿ ನಡೆಸಿ ಗಣಿ ಮಾಲೀಕರಿಗೆ 80 ಸಾವಿರ ರೂ. ದಂಡ ವಿಧಿಸಿದ್ದಾರೆ.
ಆಲೂರಿನ ಉಳಿದ ಗಣಿ ಮಾಲೀಕರು ಅಧಿಕಾರಿಗಳು ಬರುವ ಸುಳಿವು ತಿಳಿದು ಜಾಗ ಖಾಲಿ ಮಾಡಿದ್ದರು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಭೂವಿಜ್ಞಾನಿ ಸಂಧ್ಯಾ ಕುಮಾರಿ, ಕಂದಾಯ ಇಲಾಖೆ ವಂಡ್ರೆ ವಲಯ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗ್ರಾಮ ಕರಣಿಕ ಉದಯ ತಂಡ ದಾಳಿ ನಡೆಸಿದ್ದು, ಅಕ್ರಮ ಗಣಿ ಮಾಲೀಕರಿಗೆ ದಂಡ ವಿಧಿಸಿ, ಕಲ್ಲುಕ್ವಾರಿ ಹೊಂಡ ಮುಚ್ಚಿ ಶಾಲಾ ಮಕ್ಕಳ ತಿರುಗಾಟಕ್ಕೆ ಅವಕಾಶ ನೀಡುವಂತೆ ತಾಕೀತು ಮಾಡಿದರು.
ಆಲೂರು ಗ್ರಾಮದ ಐದು ಸೆಂಟ್ಸ್ ಪರಿಸರದಲ್ಲಿ ಅಕ್ರಮ ಕೆಂಪು ಕಲ್ಲು ಕ್ವಾರಿ ನಡೆಯುತ್ತಿರುವ ಬಗ್ಗೆ ನಿನ್ನೆಯಷ್ಟೆ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿತ್ತು.
Kshetra Samachara
04/06/2022 11:49 am