ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ : ಪಡಿತರ ಅಕ್ಕಿ ಅಕ್ರಮ ಮಾರಾಟ: ಆರೋಪಿ ಬಂಧನ ,20 ಕ್ವಿಂಟಾಲ್ ಅಕ್ಕಿ ವಶಕ್ಕೆ

ಕಾರ್ಕಳ : ಸರಕಾರ ವಿತರಿಸುವ ಪಡಿತರ ಅಕ್ಕಿಯನ್ನು ಮನೆಮನೆಗೆ ಸಂಗ್ರಹಿಸಿ ಅದನ್ನು ಅಧಿಕ ಹಣಕ್ಕೆ ಮಾರಲು ಯತ್ನಿಸುತ್ತಿದ್ದ ಓರ್ವನನ್ನು ಬಂಧಿಸಲಾಗಿದೆ.

ಆರೋಪಿ ಮೊಹಮ್ಮದ್ ಅಬ್ದುಲ್ ರಹಿಮಾನ್ ಬಂಧಿತ. ಈತನಿಂದ 20 ಕ್ವಿಂಟಾಲ್ ಅಕ್ಕಿ ಮತ್ತು ಸಾಗಾಟಕ್ಕೆ ಬಳಸಿದ ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ನೀರೆ ಹಾಗೂ ಕಣಜಾರು ಗ್ರಾಮಗಳ ಬಿಪಿಎಲ್ ಕುಟುಂಬದವರಿಗೆ ತಿಂಗಳಿಗೆ 50 ಕೆಜಿ ಅಕ್ಕಿ ಸಿಗುತ್ತಿದ್ದು, ಕೆಲವರು ಅದನ್ನು ಈ ವ್ಯಕ್ತಿಗೆ ನೀಡಿ ಕೆಜಿಗೆ 10 ರೂ.ಗಳಂತೆ ಹಣ ಪಡೆಯುತ್ತಿದ್ದರು. ಆತ ಈ ಅಕ್ಕಿಯನ್ನು ಮಿಲ್ನಲ್ಲಿ ಪಾಲಿಷ್ ಮಾಡಿಸಿ ಕುಚ್ಚಲಕ್ಕಿಯನ್ನಾಗಿ ಪರಿವರ್ತಿಸಿ ಅಧಿಕ ಬೆಲೆಗೆ ಮಾರುತ್ತಿದ್ದ ಎನ್ನುವುದು ಬೆಳಕಿಗೆ ಬಂದಿದೆ. ಫುಡ್ ಇನ್ಸ್ಪೆಕ್ಟರ್ ಸುಮತಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By :
Kshetra Samachara

Kshetra Samachara

03/06/2022 09:34 pm

Cinque Terre

7.86 K

Cinque Terre

0

ಸಂಬಂಧಿತ ಸುದ್ದಿ