ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು ಉಡುಪಿ ನಡುವಿನ ಕಾರ್ನಾಡು ಕೊಕ್ಕರ ಕಲ್ಲು ಬಳಿ ಹೆದ್ದಾರಿ ಕುಸಿತಕ್ಕೆ ಸಂಬಂಧಪಟ್ಟಂತೆ ಹಳೆಯಂಗಡಿಯ ವಕೀಲರೊಬ್ಬರು ಬಾರೀ ಅಪಾಯದಿಂದ ಪಾರಾಗಿದ್ದು ಹೆದ್ದಾರಿಯನ್ನು ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪ ಕೊಕ್ಕರ ಕಲ್ಲು ಎಂಬಲ್ಲಿ ಹೆದ್ದಾರಿಯು ಬೆಳ್ಳಂ ಬೆಳಗ್ಗೆ ಕುಸಿತವಾಗಿದ್ದರೂ ಇಲಾಖೆಯ ಅಧಿಕಾರಿಗಳು ಬರುವಾಗ ಬರೋಬ್ಬರಿ 12 ಗಂಟೆ ಆಗಿದೆ ಎಂದು ಸ್ಥಳೀಯ ವಕೀಲರಾದ ಡೇನಿಯಲ್ ದೇವರಾಜ್ ಆರೋಪಿಸಿದ್ದಾರೆ. ಅವರು ಮಾತನಾಡಿ ತಾನು ತುರ್ತಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಲ್ಕಿಗೆ ಹೋಗುತ್ತಿರುವಾಗ ಕೊಕ್ಕರಕಲ್ ಬಳಿ ಹೆದ್ದಾರಿಯ ಮೇಲೆ ಭೀಕರ ಬಿರುಕು ಬಿಟ್ಟ ಹೊಂಡದಿಂದಾಗಿ ಭಾರೀ ಅಪಘಾತದ ಕೂದಲೆಳೆಯ ಅಂತರದಿಂದ ದೇವರು ನಮ್ಮನ್ನು ರಕ್ಷಿಸಿದ್ದಾರೆ ಎಂದು ಹೇಳಿದ್ದಾರೆ. ಅವರ ಕಾರು ಹೊಂಡಕ್ಕೆ ಬಿದ್ದು ಜಖಂಗೊಂಡಿದ್ದು ಬಳಿಕ ಸಹೋದ್ಯೋಗಿಗಳು ಮೇಲಕ್ಕೆತ್ತಿದ್ದಾರೆ. ಬಳಿಕ ಹೆದ್ದಾರಿ ಮೇಲೆ ಬಿರುಕು ಬಿಟ್ಟಿರುವ ಹೊಂಡದ ಮೇಲೆ ಗೊಬ್ಬರದ ಸೊಪ್ಪಿನ ಮರವನ್ನುಇಟ್ಟು ಹೆದ್ದಾರಿ ಇಲಾಖೆ, ಟ್ರಾಫಿಕ್ ಪೊಲೀಸರಿಗೆ ತಿಳಿಸಿದ್ದರೂ ಹೆದ್ದಾರಿ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಹೆದ್ದಾರಿ ಕಳಪೆ ಕಾಮಗಾರಿ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮಕೈಗೊಂಡು ಹೆದ್ದಾರಿಯನ್ನು ಸರಿಪಡಿಸದೇ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸಾರ್ವಜನಿಕ ಹಿತಾಸಕ್ತಿದಾವೆ ಹೂಡಲು ನಿರ್ಧರಿಸಿದ್ದಾರೆ.ಹಾಗೂ ಕಾರಿನ ಇಂಜಿನಿ ಗೆ ಸುಮಾರು .60000ರೂ ಹಾನಿಯಾಗಿದ್ದು ಈ ಬಗ್ಗೆ ಹೆದ್ದಾರಿ ಇಲಾಖೆ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.ಈ ಹಿಂದೆ ಡೇನಿಯಲ್ ದೇವರಾಜ್ ರವರು ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಸರಿಪಡಿಸುವಂತೆದ.ಕ ಜಿಲ್ಲಾಧಿಕಾರಿಗಳಿಗೆ ಹೆದ್ದಾರಿ ಹೊಂಡದ ಕಳಪೆ ಕಾಮಗಾರಿ ಸರಿಪಡಿಸುವಂತೆ ಮನವಿ ನೀಡಿದ್ದರೂ ಈವರೆಗೂ ಸರಿಪಡಿಸಿಲ್ಲ.ರಾಷ್ಟ್ರೀಯ ಹೆದ್ದಾರಿಯನ್ನು ಅವೈಜ್ಞಾನಿಕ ರೀತಿಯಲ್ಲಿ ನಿರ್ಮಾಣವಾಗಿದ್ದು ಹೆದ್ದಾರಿಯ ಅಗಲಕ್ಕೂ 1ಫೀಟ್ ಡೌನ್ ಆಗಿ ಅಪಾಯದಲ್ಲಿ ಇದ್ದರೂ ಯಾವುದೇ ಇಲಾಖೆಯ ಅಧಿಕಾರಿಗಳು ಸ್ವಂದಿಸದೇ ಬೇಜವಾಬ್ದಾರಿಯಿಂದ ಇದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರಪೂಜಾರಿ ಮತ್ತು ಸಿಬ್ಬಂದಿಗಳು ಪರಿಶೀಲಿಸಿ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದರೂ ಸ್ಥಳಕ್ಕೆ ತಡವಾಗಿ ಆಗಮಿಸಿದ ಹೆದ್ದಾರಿ ಇಲಾಖೆ ಇಂಜಿನಿಯರ್ ಸಿಬ್ಬಂದಿಗಳು ತಾತ್ಕಾಲಿಕ ನೆಲೆಯಲ್ಲಿ ಕಾಮಗಾರಿ ಆರಂಭಿಸಿದ್ದು ಹೆದ್ದಾರಿಯ ಹೊಂಡವನ್ನು ಮುಚ್ಚಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಮುಲ್ಕಿ ಕೊಕ್ಕರಕಲ್ ಬಳಿ ಏಕಾಏಕಿ ರಸ್ತೆ ಕುಸಿತ ಸ್ಥಳೀಯರನ್ನು ಆತಂಕಕ್ಕೀಡು ಮಾಡಿದ್ದು ತಾತ್ಕಾಲಿಕ ತೇಪೆ ಕಾರ್ಯ ಎಷ್ಟು ದಿನ ಮಟ್ಟಿಗೆ ಉಳಿಯುವುದು ಎಂದು ಅನುಮಾನಕ್ಕೆ. ಎಡೆಮಾಡಿಕೊಟ್ಟಿದೆ
Kshetra Samachara
24/09/2020 07:17 pm