ಮುಲ್ಕಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಪ್ರದೇಶ ಹೆಜಮಾಡಿ ಟೋಲ್ ಗೇಟ್ ನಲ್ಲಿ ಉತ್ತರ ಭಾರತದ ಕಾರ್ಮಿಕರ ದಿಢೀರ್ ಮುಷ್ಕರ ದಿಂದಾಗಿ ಕೆಲಹೊತ್ತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ರಾ. ಹೆ. 66ರ ಹೆಜಮಾಡಿ ಟೋಲ್ ಪ್ಲಾಜಾ ದಲ್ಲಿ ಕೆಲಸ ಮಾಡುತ್ತಿರುವ ಉತ್ತರ ಭಾರತ ಮೂಲದ ಕಾರ್ಮಿಕರಿಗೆ ವೇತನ ನೀಡದ ಕಾರಣ ದಿಢೀರ್ ಮುಷ್ಕರ ನಡೆಸಿದ್ದಾರೆ.
ಈ ಸಂದರ್ಭ ಹೆಜಮಾಡಿ ಟೋಲ್ ನಲ್ಲಿ ಏಕಾಏಕಿ ವಾಹನ ತಡೆ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿತು.
ಹೆದ್ದಾರಿಯಲ್ಲಿ ತುರ್ತು ಸಂಚಾರ ನಡೆಸಬೇಕಾಗಿದ್ದ ಕೆಲ ವಾಹನ ಚಾಲಕರು ಟೋಲ್ ಮ್ಯಾನೇಜರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಟೋಲ್ ಬಳಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿರುವುದನ್ನು ಗಮನಿಸಿದ ಟೋಲ್ ಮ್ಯಾನೇಜರ್ ಕೂಡಲೇ ಕಾರ್ಮಿಕರಿಗೆ ವೇತನ ವಿತರಿಸಿ ದ್ದಾರೆ ಎನ್ನಲಾಗಿದ್ದು, ತತ್ ಕ್ಷಣ ಕಾರ್ಮಿಕರು ಮುಷ್ಕರ ನಿಲ್ಲಿಸಿ ಕೆಲಸಕ್ಕೆ ಹಾಜರಾಗಿದ್ದಾರೆ. ಹೆಜಮಾಡಿ ಟೋಲ್ ನಲ್ಲಿ ಏಕಾಏಕಿ ನಡೆದ ಕಾರ್ಮಿಕರ ಮುಷ್ಕರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೋಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
Kshetra Samachara
24/12/2020 07:15 pm