ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಮಂತೂರು: ಕಲ್ಲಾಪು ಅಣೆಕಟ್ಟು ಬಳಿ ಬಿದ್ದಿದ್ದ ಮರ ತೆರವು; ಯುವಕರ ಶ್ರಮದಾನಕ್ಕೆ ಶ್ಲಾಘನೆ

ಮುಲ್ಕಿ: ಅತಿಕಾರಿಬೆಟ್ಟು ಮತ್ತು ಕಿಲ್ಪಾಡಿ ಪಂ. ವ್ಯಾಪ್ತಿಯ ಗಡಿಭಾಗ ಶಿಮಂತೂರು ಕಲ್ಲಾಪು ಕಿಂಡಿ ಅಣೆಕಟ್ಟು ಬಳಿ ಕೆಲವು ವರ್ಷಗಳಿಂದ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರ ತೆರವುಗೊಳಿಸಲಾಯಿತು.

ಹೀಗೆ ಅಡ್ಡವಾಗಿ ಬಿದ್ದಿದ್ದ ಮರದಿಂದಾಗಿ ಜನರು ನಡೆದಾಡಲು ಅನಾನುಕೂಲವಾಗಿತ್ತು. ಭಾನುವಾರ ಶಿಮಂತೂರು ಯುವಕ ಮಂಡಲದ ಸದಸ್ಯರು ಅತಿಕಾರಿಬೆಟ್ಟು ಪಂ. ಪಿಡಿಒ ರವಿ ಸಹಕಾರದೊಂದಿಗೆ ಗೋಳಿಮರವನ್ನು ಶ್ರಮದಾನ ಮೂಲಕ ತೆರವುಗೊಳಿಸಿದರು. ಇದರಿಂದಾಗಿ ಸ್ಥಳೀಯರು ಸುಬ್ರಹ್ಮಣ್ಯ ಷಷ್ಠಿ ದಿನದಂದು ಕಿಲ್ಪಾಡಿ ಕುಮಾರಮಂಗಿಲ ದೇವಸ್ಥಾನಕ್ಕೆ ಹೋಗಿ ಬರಲು ಸುಲಭವಾಗುವಂತೆ ಮಾಡಿದರು.

ಈ ಪ್ರದೇಶದಲ್ಲಿಗ್ರಾಮಸ್ಥರು ಕೃಷಿಯನ್ನೇ ಅವಲಂಬಿಸಿದ್ದು, ಕಿಂಡಿ ಅಣೆಕಟ್ಟನ್ನೂ ದುರಸ್ತಿಗೊಳಿಸಿದರೆ ಕೃಷಿಗೆ ಸಹಕಾರಿಯಾಗುತ್ತದೆ ಎಂದು ರೈತರು ಹೇಳಿದರು.

ಶಿಮಂತೂರು ಯುವಕ ಮಂಡಲದ ಶ್ರಮದಾನ ಸೇವೆ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಕೆಲ ದಿನಗಳ ಹಿಂದೆ ಇದೇ ಯುವಕ ಮಂಡಲದ ಸದಸ್ಯರು ಶಿಮಂತೂರು ಪರಿಸರದ ಎಕರೆಗಟ್ಟಲೆ ಕೃಷಿಗೆ ಪೂರಕವಾಗಿರುವ ದೇವಳದ ಬಳಿಯ ಕುಲಂದಕಟ್ಟ ಅಣೆಕಟ್ಟಿನ ಕಸಕಡ್ಡಿ ಮತ್ತಿತರ ತ್ಯಾಜ್ಯ ತೆಗೆದು ಮಾದರಿಯಾಗಿದ್ದರು.

Edited By : Nagaraj Tulugeri
Kshetra Samachara

Kshetra Samachara

14/12/2020 09:52 am

Cinque Terre

8.05 K

Cinque Terre

0

ಸಂಬಂಧಿತ ಸುದ್ದಿ