ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಹೆದ್ದಾರಿಯಲ್ಲಿ ಕೆಟ್ಟುನಿಂತ ಬೃಹದಾಕಾರದ ಅಪಾಯಕಾರಿ ಟ್ರಕ್

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಆರ್ ಆರ್ ಟವರ್ಸ್ ಬಳಿ ಪಡುಬಿದ್ರೆಯ ಸುಜ್ಲಾನ್ ಕಂಪನಿಯ ಗಾಳಿಯಂತ್ರವನ್ನು ಹೇರಿಕೊಂಡ ಟ್ರಕ್ ಕಿಟ್ಟು ನಿಂತಿದ್ದು ಅಪಾಯಕಾರಿಯಾಗಿ ಗೋಚರಿಸುತ್ತಿದೆ.

ಬುಧವಾರ ರಾತ್ರಿಯಿಂದಲೇ ಹೆದ್ದಾರಿಯಲ್ಲಿ ಟ್ರಕ್ ನಿಂತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಮಿಷಕ್ಕೊಂದರಂತೆ ವಾಹನಗಳ ಚಲಿಸುತ್ತಿದ್ದು ಹೆದ್ದಾರಿಯಲ್ಲಿ ನಿಂತಿರುವ ಟ್ರಕ್ಕಿನಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರಾದ ಅಬ್ದುಲ್ ರಜಾಕ್ ತಿಳಿಸಿದ್ದಾರೆ.

ಪಡುಬಿದ್ರೆಯ ನಂದಿಕೂರು ಸಮೀಪ ಕಾರ್ಯಾಚರಿಸುತ್ತಿದ್ದ ಸುಜ್ಲಾನ್ ಕಂಪನಿ ಮುಚ್ಚುಗಡೆ ಯಾಗಿದ್ದು ಅದರ ಗಾಳಿಯಂತ್ರಗಳನ್ನು ಬೇರೆ ಕಡೆಗೆ ಬೃಹದಾಕಾರದ ಟ್ರಕ್ಕುಗಳಲ್ಲಿ ಸಾಗಿಸಲಾಗುತ್ತಿದ್ದು ಅದರಲ್ಲಿ ಒಂದು ಟ್ರಕ್ ಮುಲ್ಕಿ ಹೆದ್ದಾರಿಯಲ್ಲಿ ಕೆಟ್ಟು ನಿಂತಿದೆ ಹೆದ್ದಾರಿಯಲ್ಲಿ ನಿಂತಿರುವ ಬ್ರಹದಾಕಾರದ ಗಾಳಿಯಂತ್ರವನ್ನು ನೋಡಿಕೊಂಡು ಇತರೆ ವಾಹನಗಳ ಚಾಲಕರು ನೋಡಿಕೊಂಡು ವಾಹನ ಚಲಾಯಿಸುತ್ತಿದ್ದು ಅಪಾಯಕಾರಿಯಾಗಿ ಗೋಚರಿಸುತ್ತಿದೆ. ಕೂಡಲೇ ಟ್ರಾಫಿಕ್ ಪೊಲೀಸರು ವಾಹನವನ್ನು ಸ್ಥಳದಿಂದ ತೆರವುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Edited By :
Kshetra Samachara

Kshetra Samachara

03/12/2020 10:19 pm

Cinque Terre

25.52 K

Cinque Terre

0

ಸಂಬಂಧಿತ ಸುದ್ದಿ