ಬಂಟ್ವಾಳ: ಇದು ರಸ್ತೆ ರಿಪೇರಿ ಕಾರ್ಯ ನಡೆದಿದೆ ಎನ್ನಲಾದ ರಾಷ್ಟ್ರೀಯ ಹೆದ್ದಾರಿ 75ರ ನರಹರಿ ಪರ್ವತ ಬಳಿಯ ಮತ್ತು ಮೇಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣಾ ಸಮೀಪದ ದೃಶ್ಯ. ಮೇಲ್ಕಾರ್ ಟ್ರಾಫಿಕ್ ಠಾಣೆ ಪಕ್ಕ ರಸ್ತೆಗೆ ಡಾಂಬರು ಹಾಕಿದ ಕುರುಹುಗಳು ಇಲ್ಲ.
ನರಹರಿ ಪರ್ವತ ಬಳಿಯಲ್ಲಿ ಡಾಂಬರು ಹಾಕಿದಂತೆ ಕಾಣಿಸುತ್ತಿದ್ದರೂ ಯಾವುದೇ ಕ್ಷಣದಲ್ಲೂ ಕಿತ್ತುಹೋಗುವ ಪರಿಸ್ಥಿತಿ ಇದೆ. ತೀವ್ರ ಟೀಕೆಗೊಳಗಾದ ಬಿ.ಸಿ.ರೋಡ್ ಅಡ್ಡಹೊಳೆ ರಸ್ತೆಯ ಬಿ.ಸಿ.ರೋಡಿನಿಂದ ಮಾಣಿವರೆಗೆ ಮರುಡಾಂಬರು ಹಾಕಲಾಗಿದೆ ಎನ್ನಲಾದ ಜಾಗಗಳಲ್ಲಿ ಅಪಾಯಕಾರಿ ಗುಂಡಿಗಳು ಕಂಡುಬಂದಿವೆ, ಕೆಲವೆಡೆ ರಸ್ತೆಯ ಸನಿಹವೇ ಹೊಂಡಗಳು ಎದ್ದಿವೆ.
ವಾಹನ ಸವಾರರು ಅಪಾಯ ಎದುರಿಸುತ್ತಿದ್ದು, ಕೂಡಲೇ ಸಮರ್ಪಕವಾದ ಡಾಂಬರು ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಈಗಾಗಲೇ ತೇಪೆ ಕಾರ್ಯ ಆರಂಭಗೊಂಡಿದ್ದು, ಹಾಕಿದ ಜಾಗದಲ್ಲೆಲ್ಲ ಮತ್ತೆ ಹೊಂಡಗಳು ಏಳುತ್ತಿರುವುದು ಹಾಗೆಯೇ ರಸ್ತೆ ಪಕ್ಕದಲ್ಲಿ ಹೊಂಡಗಳು ಕಾಣಿಸಿ ಮತ್ತಷ್ಟು ಅಪಾಯಕಾರಿಯಾಗಿಸಿವೆ. ಕೆಲ ಅಪಘಾತಗಳೂ ಈ ಭಾಗದಲ್ಲಿ ಕೆಲ ದಿನಗಳಿಂದ ನಡೆಯುತ್ತಿದ್ದು, ವಾಹನ ಸವಾರರು ಎಚ್ಚರದಿಂದಿರಬೇಕಾದ ಪರಿಸ್ಥಿತಿ ಇದೆ.
Kshetra Samachara
02/12/2020 08:23 pm