ಮುಲ್ಕಿ:ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಮಹಾನಗರ ಪಾಲಿಕೆ ವ್ಯಾಪ್ತಿಯ ಮೂರನೇ ವಾರ್ಡಿನಲ್ಲಿ ಪಾಲಿಕೆಯ ಸ್ವಾಸ್ಥ ಕುಟೀರ ಜ್ಯೋತಿ ಯೋಜನೆಯನ್ವಯ ಅಭ್ಯುದಯ ಭಾರತಿ ಸೇವಾ ಟ್ರಸ್ಟ್ (ರಿ) ಗಣೇಶಪುರ ಸಂಯೋಜನೆಯಲ್ಲಿ ಎರಡು ಕುಟುಂಬಗಳಿಗೆ ವಿದ್ಯುತ್ ಸಂಪರ್ಕವನ್ನು ಶಾಸಕರಾದ ಡಾ.ವೈ ಭರತ್ ಶೆಟ್ಟಿ ಹಾಗೂ ಟ್ರಸ್ಟ್ ನ ಅಧ್ಯಕ್ಷರಾದ ಕೂಸಪ್ಪ ಶೆಟ್ಟಿಗಾರ್ ರವರು ಗುರುವಾರ ಸಂಜೆ ಸ್ವಿಚ್ ಆನ್ ಮಾಡುವ ಮೂಲಕ ಒದಗಿಸಿದರು. ಪಾಲಿಕೆ ಚುನಾವಣೆಯ ಪೂರ್ವದಲ್ಲಿ ಈ ಕುಟುಂಬಗಳಿಗೆ ನೀಡಿದ ಭರವಸೆಯನ್ನು ಈಡೇರಿಸುವ ಮೂಲಕ ನಮ್ಮ ಈ ಭಾಗದ ಕಾರ್ಪೋರೇಟರ್ ಹಾಗೂ ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಮತ್ತು ನಮ್ಮ ಕಾರ್ಯಕರ್ತರು ಉತ್ತಮ ಕಾರ್ಯ ಮಾಡಿದ್ದಾರೆ. ಅವರೆಲ್ಲರನ್ನು ಅಭಿನಂದಿಸುವುದಾಗಿ ಶಾಸಕರು ತಿಳಿಸಿದರು.
ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ನ ಅಧ್ಯಕ್ಷರು ಕೂಸಪ್ಪ ಶೆಟ್ಟಿಗಾರ್, ಟ್ರಸ್ಟ್ ನ ಸದ್ಯಸರಾದ ವಸಂತ್ ರಾವ್ ,
ಮ.ನ.ಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ, ಗಣೇಶಪುರ ಮಹಾಗಣಪತಿ ದೇವಸ್ಥಾನ ದ ವ್ಯವಸ್ಥಾನ ಸಮಿತಿಯ ಸದಸ್ಯರಾದ ಧರ್ಮೆಂದ್ರ ಗಣೇಶಪುರ, ಮಹಾಂಕಾಳಿ ದೈವಸ್ಥಾನ ಶಾಂತ ಗುರಿಕಾರ ಹಾಗೂ ದಯಾನಂದ ಗುರಿಕಾರ , ಹಿಂದು ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷರಾದ ಎ.ವಾದಿರಾಜ್, ಉಪಾಧ್ಯಕ್ಷರಾದ ಕರುಣಾಕರ ಶೆಟ್ಟಿ, ಉತ್ತರ ಮಂಡಲ ಉಪಾಧ್ಯಕ್ಷರಾದ ರತ್ನ ದೇವದಾಸ್, ಮಂಡಲ ಮಹಿಳಾ ಮೊರ್ಚಾ ಕಾರ್ಯದರ್ಶಿಯಾದ ಶೈಲಜಾ ಗಣೇಶಕಟ್ಟೆ, ಮಂಡಲ ಸದ್ಯಸರಾದ ಜಯಕುಮಾರ್ ಗಣೇಶಪುರ, ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ನ ಸದಸ್ಯರು, ಭಾರತೀಯ ಜನತಾ ಪಾರ್ಟಿ 3 ನೇ ವಾರ್ಡ್ ಕಾರ್ಯಕರ್ತರು ಹಾಗೂಫಲಾನುಭವಿಯಾದ ಗುಲಾಬಿ ಮತ್ತು ಪ್ರೇಮ್ ಕುಮಾರ್ ಮನೆಯವರು, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
Kshetra Samachara
27/11/2020 11:56 am