ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೋಟ ಕಾರಂತಜ್ಜನ ಹೆಸರಿದ್ದ ರಸ್ತೆಯ ಚರಂಡಿ ದುರ್ವಾಸನೆ : ಸಚಿವರೆ ಯಾಕೆ ಈ ನಿರ್ಲಕ್ಷ !?

ಉಡುಪಿ: ಪರಿಸರಸ್ನೇಹಿ, ಸಾಹಿತಿ, ಕೋಟ ಶಿವರಾಮ ಕಾರಂತರ ಹುಟ್ಟೂರಿನ ರಸ್ತೆಯ ಚರಂಡಿಯಲ್ಲಿ ಹುಳು ಹಪ್ಪಟ್ಟೆಗಳಾಗಿ ದುರ್ವಾಸನೆ ಹರಡುತ್ತಿದೆ,ಜನರು ಮೂಗು ಮುಚ್ಚಿಕೊಂಡು ರಸ್ತೆಯಲ್ಲಿ ನಡೆಯುವ ಪರಿಸ್ಥಿತಿ ಎದುರಾಗಿದೆ. ಅದಷ್ಟೇ ಅಲ್ಲದೆ ಕಾರಂತಜ್ಜನ ಹೆಸರು ಕೂಡ ಈ ರಸ್ತೆಗೆ ಇಡಲಾಗಿದೆ.ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಒಂದನೇ ವಾರ್ಡ್ ರಸ್ತೆ ಬದಿಯ ಚರಂಡಿಗಳಲ್ಲಿ, ಕಲ್ಮಶದ ನೀರು ತುಂಬಿ ದುರ್ವಾಸನೆ ಸೃಷ್ಟಿಮಾಡಿದೆ.

ಅಕ್ಕಪಕ್ಕದಲ್ಲಿ ಮನೆಗಳಿದ್ದು ಅಲ್ಲಿ ವಾಸ ಮಾಡುವುವವರ ಪರಿಸ್ಥಿತಿ ಚಿಂತಾಜನಕವಾಗಿದೆ. ಮನೆಯಲ್ಲಿ ಮಕ್ಕಳು ವಯೋವೃದ್ಧರು ದುರ್ವಾಸನೆಯಿಂದ ಬೇಸತ್ತು ಹೋಗಿದ್ದಾರೆ,ಸಾಕಷ್ಟು ಬಾರಿ ಸ್ಥಳೀಯರು ಗ್ರಾಮಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗಲಿಲ್ಲವಂತೆ. ಈ ರಸ್ತೆಯ ಚರಂಡಿಗೆ ಲತಾ ಹೋಟೆಲಿಂದ ಪಾತ್ರೆಗಳನ್ನು ತೊಳೆದ ಕಲ್ಮಶ ನೀರು ಬಿಡುತ್ತಾರೆ, ಎನ್ನುವ ಆರೋಪ ಕೂಡ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಜೋಗಿ ಸಮುದಾಯದವರು ಕೂಡ ಕಲ್ಮಶದ ನೀರುಗಳನ್ನು ಇದೇ ಚರಂಡಿಗೆ ಬಿಡ್ತಾ ಇದ್ದಾರೆ, ಅನ್ನುವ ಇನ್ನೊಂದು ಆರೋಪ ಕೂಡ ಎದ್ದು ಕೇಳಿಸುತ್ತಿದ್ದೆ.

ಕೋಟ ಶಿವರಾಮ ಕಾರಂತರ ಹುಟ್ಟೂರು ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಹುಟ್ಟೂರಿನಲ್ಲಿ , ಮೂಗು ಮುಚ್ಚಿಕೊಂಡು ರಸ್ತೆಯಲ್ಲಿ ಜನರು ಹೋಗುವ ಪರಿಸ್ಥಿತಿ ಎದುರಾಗಿದ್ದು ವಿಪರ್ಯಾಸವೇ ಸರಿ. ಆರೋಗ್ಯ ಇಲಾಖೆಯವರು ಇತ್ತ ಕಡೆ ಗಮನ ಹರಿಸಿ ಈ ಕೊಳಚೆ ಕಲ್ಮಶ ನೀರು ಗಳಿಂದ ಆಗುವ ತೊಂದರೆಗಳ ಬಗ್ಗೆ ಗಮನ ಹರಿಸಬೇಕಾಗಿದೆ, ಈ ದುರ್ವಾಸನೆಯಿಂದ ಅಕ್ಕಪಕ್ಕದ ಮನೆಯವರು ಕಂಗೆಟ್ಟು ಹೋಗಿದ್ದಂತು ಸುಳ್ಳಲ್ಲ ನೀರಿನಲ್ಲಿ ಹುಳಗಳು ತೇಲಾಡುತ್ತೀವೆ, ಇಂಥ ಕರೋನ ರೋಗದ ನಡುವೆಯೂ ಇನ್ನೊಂದು ಮಾರಣಾಂತಿಕ ಕಾಯಿಲೆ ಈ ಪರಿಸರದಲ್ಲಿ ಉದ್ಭವಿಸದೆ ಇರಲಿ ಅನ್ನುವುದು ನಮ್ಮ ಆಶಯ.

ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ.

Edited By : Manjunath H D
Kshetra Samachara

Kshetra Samachara

25/11/2020 12:31 pm

Cinque Terre

15.67 K

Cinque Terre

0

ಸಂಬಂಧಿತ ಸುದ್ದಿ