ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನೇತ್ರಾವತಿ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಾಣ ಕಾಮಗಾರಿ ವೀಕ್ಷಿಸಿದ ಸಚಿವ ಮಾಧು ಸ್ವಾಮಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಹರೇಕಳ ಬಳಿ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ಸಹಿತ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಾಣದ ಕಾಮಗಾರಿಯನ್ನು ಸಣ್ಣ ನೀರಾವರಿ ಸಚಿವ ಜೆ ಸಿ ಮಾಧು ಸ್ವಾಮಿ ವೀಕ್ಷಿಸಿದ್ರು.ಈ ವೇಳೆ ಮಾತನಾಡಿದ ಸಚಿವ ಮಾಧುಸ್ವಾಮಿ ಉಪ್ಪು ನೀರು ಪ್ರಸ್ತಾವಿತ ಕಾಮಗಾರಿ ನಿವೇಶನದಿಂದ ಸುಮಾರು 12 ಕಿಮೀ ಮೇಲ್ಭಾಗದವರೆಗೆ ಪ್ರವೇಶಿಸಿ ಸುತ್ತಮುತ್ತಲಿನ ಅಂರ್ತಜಲ ಲವಣಾಂಶದಿಂದ ಕೂಡಿರುವುದರಿಂದ ನೇತ್ರಾವತಿ ನದಿಗೆ ಅಣೆಕಟ್ಟು ನಿರ್ಮಿಸಿದಲ್ಲಿ ಉಪ್ಪು ನೀರು ಮೇಲ್ಭಾಗಕ್ಕೆ ನುಗ್ಗುದನ್ನು ತಡೆಯಬಹುದು,ಅಲ್ಲದೇ ಸಿಹಿ ನೀರನ್ನು ಸಂಗ್ರಹಿಸಿ ಕೃಷಿ ಚಟುವಟಿಕೆಗಳಿಗೆ ಬಳಸಬಹುದು ಇದರಿಂದ ಅಂತರ್ಜಲ ಮಟ್ಟ ವೃದ್ದಿಯಾಗುತ್ತದೆ. ಈ ಪ್ರದೇಶದಲ್ಲಿ ಸೇತುವೆ ನಿರ್ಮಾಣದಿಂದ ಹರೇಕಳ,ಅಡ್ಯಾರು,ಕಣ್ಣೂರು ಭಾಗದ ಜನರಿಗೆ ಸಂಪರ್ಕ ಸೇತುವೆಯಾಗಲಿದೆ ಎಂದರು..

Edited By : Manjunath H D
Kshetra Samachara

Kshetra Samachara

24/11/2020 07:35 pm

Cinque Terre

14.8 K

Cinque Terre

0

ಸಂಬಂಧಿತ ಸುದ್ದಿ