ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ರಸ್ತೆಯಲ್ಲಿ ಕಂದಕ ನಿರ್ಮಿಸಿ ಕ್ಯಾನ್ಸರ್ ರೋಗಿಯ ಚಿಕಿತ್ಸೆಗೆ ಅಡ್ಡಿ!

ಮಂಗಳೂರು: ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯ ಮನೆಗೆ ಹೋಗುವ ದಾರಿಯಲ್ಲಿ ಕಂದಕಗಳನ್ನು ನಿರ್ಮಿಸಿ ಮನುಷ್ಯತ್ವ ಹಾಗೂ ಮಾನವೀಯತೆ ಮರೆತ ಘಟನೆ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ಪಂಚಾಯತ್ ವ್ಯಾಪ್ತಿಯ ರೆಖ್ಯ ಗ್ರಾಮದ ಎಂಜಿರದಲ್ಲಿ ನಡೆದಿದೆ.

ರಾ.ಹೆ.ಯಿಂದ ಚಿನ್ನಮ್ಮ ಎಂಬವರ ಮನೆಗೆ ಹೋಗುವ ದಾರಿ ಇದೆ. ಈ ಒಂದು ಕಿ.ಮೀ. ದಾರಿಯ ಅಲ್ಲಲ್ಲಿ ಕಂದಕವನ್ನು ರೆಜಿ ಎಂಬವರು ನಿರ್ಮಿಸಿದ್ದಾರೆ. ಈ ಹಿಂದೆ ಇದ್ದ ದಾರಿಯನ್ನು ಯಾವುದೇ ಮಾಹಿತಿ ನೀಡದೆ ಬಂದ್ ಮಾಡಲಾಗಿತ್ತು. ಚಿನ್ನಮ್ಮ ಅವರು ದೊಡ್ಡ ಕರುಳಿನ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ತುರ್ತು ಸಂದರ್ಭ ಅವರ ಮನೆಗೆ ಆಂಬ್ಯುಲೆನ್ಸ್ ಸಂಚಾರಕ್ಕೂ ತೊಂದರೆಯಾಗಿದೆ. ಈ ವೇಳೆ ಸ್ಥಳೀಯರು ಜೊತೆಗೂಡಿ ಅವರನ್ನು ಚೆಯರ್ ಮುಖಾಂತರ ಎತ್ತಿಕೊಂಡು ಆಂಬ್ಯುಲೆನ್ಸ್ ಗೆ ಸಾಗಿಸಿದ್ದಾರೆ. ಆದರೆ, ಮನುಷ್ಯತ್ವ ಮರೆತು ದುಡ್ಡಿನ ವ್ಯಾಮೋಹಕ್ಕೆ ರೆಜಿ ಎಂಬವರು ಬಿದ್ದು ಉದ್ದೇಶಪೂರ್ವಕವಾಗಿ ರಸ್ತೆಯಲ್ಲಿ ಕಂದಕ ನಿರ್ಮಿಸಿದ್ದಾರೆ. ಇವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

Edited By : Nagesh Gaonkar
Kshetra Samachara

Kshetra Samachara

21/11/2020 08:36 pm

Cinque Terre

29.53 K

Cinque Terre

7

ಸಂಬಂಧಿತ ಸುದ್ದಿ