ಮುಲ್ಕಿ: ಸುರತ್ಕಲ್ ಪೇಟೆಯಲ್ಲಿ ಸಾರ್ವಜನಿಕರಿಗೆ ಸುಸಜ್ಜಿತ ವಾಹನ ಪಾರ್ಕಿಂಗ್ ವ್ಯವಸ್ಥೆ ಆಗಬೇಕು ಮತ್ತು ಹೊಸಬೆಟ್ಟುವಿನಿಂದ ಸುರತ್ಕಲ್ ತಡಂಬೈಲ್ ವರೆಗೆ ಹೆದ್ದಾರಿ ಡಿವೈಡರ್ ಮೇಲೆ ದಾರಿದೀಪ ವ್ಯವಸ್ಥೆ ಮಾಡಿ ಕೊಡಬೇಕಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ವೈ. ಭರತ್ ಶೆಟ್ಟಿಯವರಿಗೆ ಮಂಗಳೂರು ತಾಲೂಕು ನಾಗರಿಕ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಮನವಿಗೆ ಸ್ಪಂದಿಸಿದ ಶಾಸಕರು, ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವ ಭರವಸೆ ನೀಡಿದರು. ನಿಯೋಗದಲ್ಲಿ ಮಂಗಳೂರು ತಾಲ್ಲೂಕು ನಾಗರಿಕ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಹೊಸಬೆಟ್ಟು, ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಸದಸ್ಯರಾದ ಸದಾಶಿವ ಶೆಟ್ಟಿ,ಸುರೇಶ್ ಶೆಟ್ಟಿ, ಹರಿನಾಥ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
Kshetra Samachara
20/11/2020 06:01 pm