ಉಡುಪಿ: ಕರೊನಾ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳು ಮುಚ್ಚಿ ಸರಿಸುಮಾರು ಹತ್ತು ತಿಂಗಳುಗಳು ಕಳೆದಿದೆ. ಆದರೆ ಇದೀಗ ರಾಜ್ಯ ಸರ್ಕಾರದ ಮಾರ್ಗಸೂಚಿಯ ಮೇಲೆಗೆ ಕಾಲೇಜುಗಳನ್ನು ತೆರೆಯುವಂತೆ ಸೂಚಿಸಲಾಗಿದೆ. ಆ ನಿಟ್ಟಿನಲ್ಲಿ ಇಂದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ವಿದ್ಯಾರ್ಥಿಗಳು 10 ತಿಂಗಳ ನಂತರ ಕಾಲೇಜು ಕಡೆ ಮುಖ ಮಾಡಿದ್ದಾರೆ, ಆದರೆ ಕಾಲೇಜಿನ ತರಗತಿ ಮಾತ್ರ ಓಪನ್ ಆಗಿರಲಿಲ್ಲ, ಉಡುಪಿ ಜಿಲ್ಲೆಯ ಬೈಂದೂರು ಡಿಗ್ರಿ ಕಾಲೇಜ್ ನಲ್ಲಿ ಈ ಘಟನೆ ನಡೆದ್ದಿದ್ದು,ಕೋವಿಡ್ ಟೆಸ್ಟ್ ಮಾಡಿಕೊಳ್ಳಲು ವಿದ್ಯಾರ್ಥಿಗಳು ಬೆಳಗ್ಗಿನಿಂದ ಕಾದು ಕುಳಿತ್ತಿದ್ದರು, ಸರಿಯಾದ ಸಮಯಕ್ಕೆ ಬರದಾ ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ನಿರ್ಲಕ್ಷ.
ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಕಾದು ಕಾದು ಸುಸ್ತಾಗಿದ್ದರು ತರಗತಿ ನಡೆಯದ ಕಾರಣ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬೇಸರದಿಂದ ತಮ್ಮ ಮನೆಗಳತ್ತ ಮುಖಮಾಡಿದರು, ಇಷ್ಟು ದಿನ ಮನೆಯಲ್ಲಿ ಕೂತು ಬೇಸರವಾಗಿದ್ದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರಾರಂಭವಾಗುತ್ತದೆ ಎನ್ನುವ ಸಂತೋಷ ಇದ್ದರೂ ಕೂಡ ಇದೀಗ ಮತ್ತೆ ನಿರಾಶೆಯಾಗಿದೆ.
Kshetra Samachara
17/11/2020 03:52 pm