ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಲಿಮಾರು: ಅಣೆಕಟ್ಟೆಯಿಂದ ಉಕ್ಕಿದ ನೀರು!; ನೂರಾರು ಎಕರೆ ಪ್ರದೇಶ ಜಲಾವೃತ, ಕೃಷಿ ನಾಶ

ಪಡುಬಿದ್ರಿ: ಪಲಿಮಾರಿನಲ್ಲಿ ಶಾಂಭವಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಉಪ್ಪುನೀರು ತಡೆ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ನೀರು ಹೊರಹರಿವಿಗೆ ಸಂಪರ್ಕಿಸುವ ತೋಡುಗಳಲ್ಲಿ ಹೂಳು ತುಂಬಿ ಉಭಯ ಜಿಲ್ಲೆಗಳ ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿ ಗ್ರಾಮಸ್ಥರು ಸಂಕಷ್ಟಪಡುವಂತಾಗಿದೆ.

25 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಸುಮಾರು 600 ಎಕರೆ ಪ್ರದೇಶಕ್ಕೆ ಸಣ್ಣ ನೀರಾವರಿ ಇಲಾಖೆ ಮೂಲಕ

ನೀರೊದಗಿಸಲು ನಿರ್ಮಿಸಿದ ಅಣೆಕಟ್ಟೆ ಕಾಮಗಾರಿ ದೋಷದಿಂದ ಹಲವು ಬಾರಿ ದುರಸ್ತಿ ಮಾಡಿದ್ದರೂ ಸಮಸ್ಯೆಗೆ ಮುಕ್ತಿ ದೊರೆತಿರಲಿಲ್ಲ.

ಅಣೆಕಟ್ಟಿನ ಸಮಸ್ಯೆ ಬಗ್ಗೆ ಗ್ರಾಮಸ್ಥರಿಂದ ಸದಾ ದೂರು ಬರುತ್ತಿತ್ತು.

ಈ ಹಿನ್ನೆಲೆಯಲ್ಲಿ ಹಳೆ ಅಣೆಕಟ್ಟೆ ಬಳಿಯಲ್ಲಿಯೇ ಸಣ್ಣ ನೀರಾವರಿ ಇಲಾಖೆ ಮೂಲಕ 7.5 ಕೋಟಿ ರೂ. ವೆಚ್ಚದಲ್ಲಿ ನೂತನ ಅಣೆಕಟ್ಟು ನಿರ್ಮಿಸಲಾಗಿತ್ತು.

15 ದಿನಗಳ ಹಿಂದೆ ಅಣೆಕಟ್ಟೆಗೆ ಹಲಗೆ ಅಳವಡಿಸಲಾಗಿತ್ತು. ಪರಿಣಾಮ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ನೀರು ಹೊರಹರಿವಿಗೆ ಸಂಪರ್ಕಿಸುವ ತೋಡುಗಳಲ್ಲಿ ಹೂಳು ತುಂಬಿದ್ದರಿಂದ ಉಡುಪಿ ಜಿಲ್ಲೆಯ ಪಲಿಮಾರು, ಇನ್ನಾ ಮತ್ತು ದ.ಕ. ಜಿಲ್ಲೆಯ ಬಳ್ಕುಂಜೆ ಗ್ರಾಮದ ನೂರಾರು ಎಕರೆ ಪ್ರದೇಶ ಜಲಾವೃತವಾಗಿದೆ.

ಇದೀಗ ನೂರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದ್ದು, ಬೆಳೆದ ತರಕಾರಿ ಗಿಡಗಳು ಕೊಳೆತು ಹೋಗಿವೆ. ನಾಲ್ಕು ಬಾವಿಗಳ ನೀರು ಮಲಿನಗೊಂಡು ಕುಡಿಯುವ ನೀರಿಗೂ ಪರದಾಡುವಂತಾಗಿದೆ.

ಮಳೆಗಾಲದಲ್ಲಿ ನೆರೆಯಿಂದ ಭತ್ತದ ಕೃಷಿ ಮಾಡಲಾಗದೆ, ಸುಗ್ಗಿ ಬೆಳೆಗೆ ಮುಂದಾದರೂ ಬೆಳೆಯಲಾಗದೆ ಈ ಭಾಗದ ಕೃಷಿಕರು ಅತಂತ್ರರಾಗಿದ್ದಾರೆ. ಜಾನುವಾರು ಮೇವಿಗೂ ತತ್ವಾರ ಉಂಟಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

Edited By :
Kshetra Samachara

Kshetra Samachara

13/12/2020 09:20 pm

Cinque Terre

21.2 K

Cinque Terre

0

ಸಂಬಂಧಿತ ಸುದ್ದಿ