ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟಪಾಡಿ : ಶಿಥಿಲಾವಸ್ಥೆಯಲ್ಲಿ ನೀರಿನ ಟ್ಯಾಂಕ್, ಆತಂಕಕ್ಕೀಡಾದ ಜನ

ವರದಿ : ಶಫೀ ಉಚ್ಚಿಲ

ಕಟಪಾಡಿ :ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷಕ್ಕೆ ಕಟಪಾಡಿಯ ಜನತೆ ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.ಯಾಕಪ್ಪಾ ಇಷ್ಟೊಂದು ಭಯ ಇವರಿಗೆ ಅಂತೀರಾ ಹಾಗಾದ್ರೆ ಈ ವರದಿ ನೋಡಿ...

ಉಡುಪಿ ಜಿಲ್ಲೆಯ ಕಟಪಾಡಿ ಪೇಟೆಯ ಹೃದಯಭಾಗದಲ್ಲಿರುವ ನೀರಿನ ಓವರ್ ಹೆಡ್ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದ್ದು ಯಾವುದೇ ಕ್ಷಣದಲ್ಲಿ ಬೀಳುವ ಪರಿಸ್ಥಿತಿಯಲ್ಲಿದೆ. ಬಹಳ ವರ್ಷ ಹಳೆಯದಾದ ಈ ಟ್ಯಾಂಕ್ನ ಪಿಲ್ಲರ್ಗೆ ಅಳವಡಿಸಲಾದ ಕಬ್ಬಿನದ ಸರಳುಗಳು ತುಕ್ಕು ಹಿಡಿದಿದ್ದು ಅತ್ಯಂತ ಅಪಾಯದ ಸ್ಥಿತಿಯಲ್ಲಿದ್ದು,ಜನನಿಬಿಡ ಪ್ರದೇಶವಾಗಿರುವ ಈ ಭಾಗದಲ್ಲಿ ನೂರಾರು ಆಟೋ ರಿಕ್ಷಾಗಳು ನಿಲುಗಡೆಯಾಗುತ್ತಿದೆ.

ಈ ಬಗ್ಗೆ ಕಟಪಾಡಿ ನಾಗರಿಕ ಸಮಿತಿ ಅಧ್ಯಕ್ಷ ಡಾ. ರವೀಂದ್ರನಾಥ ಶೆಟ್ಟಿ ಮಾತನಾಡಿ,ಈ ನೀರಿನ ಟ್ಯಾಂಕ್ ಕುಸಿದರೆ ಕಟಪಾಡಿಯ ಹೃದಯಭಾಗದಲ್ಲಿರುವ ಜನರ ಪ್ರಾಣಕ್ಕೆ ಕುತ್ತು ತರಬಹುದು.ಈ ಹಿಂದೆ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ತೇಪೆ ಹಾಕುವ ಕೆಲಸ ಕಾರ್ಯ ನಡೆದಿದ್ದವು ಟ್ಯಾಂಕಿಗೆ ನೀರು ತುಂಬಿಸುವ ಕೆಲಸ ಕಾರ್ಯ ನಡೆದಿಲ್ಲ ಸದ್ಯ ಟ್ಯಾಂಕ್ ಉಪಯೋಗ ಇಲ್ಲದೆ ಶಿಥಿಲಾವಸ್ಥೆಯಲ್ಲಿದೆ ಎಂದರು.ಒಟ್ಟಾರೆಯಾಗಿ ದೊಡ್ಡ ಅನಾಹುತ ಸಂಭವಿಸುವ ಮೊದಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆಯನ್ನು ಪರಿಹರಿಸಬೇಕೆಂಬುವುದೇ ಇಲ್ಲಿನ ಜನರ ಬೇಡಿಕೆಯಾಗಿದೆ.

Edited By : Manjunath H D
Kshetra Samachara

Kshetra Samachara

04/11/2020 11:10 am

Cinque Terre

13.97 K

Cinque Terre

4

ಸಂಬಂಧಿತ ಸುದ್ದಿ