ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಪರಿಶಿಷ್ಟ ಕಾಲೊನಿ ರಸ್ತೆ ಅಭಿವೃದ್ಧಿ ಗೆ ಬಿಡುಗಡೆಗೊಂಡ ಅನುದಾನ ಬೇರೆ ರಸ್ತೆಗೆ ಬಳಕೆ; ಆಕ್ರೋಶ

ಕಡಬ: ಪರಿಶಿಷ್ಟ ಕಾಲೊನಿ ರಸ್ತೆ ಅಭಿವೃದ್ದಿಗೆ ಬಿಡುಗಡೆಗೊಂಡ ಅನುದಾನವನ್ನು ಬೇರೆ ರಸ್ತೆಯೊಂದರ ಕಾಂಕ್ರೀಟಿಕರಣಕ್ಕೆ ಬಳಸಲು ಸಿದ್ಧತೆ ನಡೆಸುತ್ತಿರುವ ಬಗ್ಗೆ ಆಕ್ರೋಶಗೊಂಡಿರುವ ದಲಿತ್ ಸೇವಾ ಸಮಿತಿ, ಇದೀಗ ಕಾನೂನು ಹೋರಾಟದ ಎಚ್ಚರಿಕೆ ನೀಡಿದೆ.

ಕಡಬ ತಾಲೂಕಿನ ಪೆರಾಬೆ ಗ್ರಾಪಂ ವ್ಯಾಪ್ತಿಯ ಅತ್ರಿಜಾಲು-ಕಡಿರಡ್ಕ(ಪ.ಜಾ.) ಮತ್ತು ಅಗತ್ತಾಡಿ-ಅತ್ರಿಜಾಲು (ಪ.ಪಂ.) ಕಾಲೊನಿ ರಸ್ತೆ ಅಭಿವೃದ್ದಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಶಾಸಕರ ಶಿಫಾರಸ್ಸಿನ ಮೇರೆಗೆ ಬಿಡುಗಡೆಯಾದ 80 ಲಕ್ಷ ರೂ. ಅನುದಾನವನ್ನು ಇದೇ ಕಾಲೊನಿಗೆ ಸಂಪರ್ಕಿಸುವ ಮುಖ್ಯ ರಸ್ತೆಗೆ ಬಳಸಿದ್ದು, ಈಗಾಗಲೇ ಕಾಮಗಾರಿ ಪ್ರಾರಂಭಿಸಲಾಗಿದೆ.

ಈ ಹಿಂದೆಯೂ ಈ ರಸ್ತೆಯ ಕಾಮಗಾರಿ ನಡೆಸಲು ಬಂದ ಗುತ್ತಿಗೆದಾರರ ಜೆಸಿಬಿಗೆ ತಡೆಯೊಡ್ಡಿದ ಘಟನೆಯೂ ನಡೆದಿತ್ತು. ಇದೀಗ ಕಾಮಗಾರಿ ಪ್ರಾರಂಭಿಸಿ ಜಲ್ಲಿ ಹಾಕಲಾಗಿದ್ದು ಈ ಹಿನ್ನೆಲೆಯಲ್ಲಿ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ನೇತೃತ್ವದಲ್ಲಿ ಅಲ್ಲಿಯ ಕಾಲೊನಿ ನಿವಾಸಿಗಳು ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಸುಳ್ಯ ಶಾಸಕ ಎಸ್.ಅಂಗಾರ ಕಾಲೊನಿ ರಸ್ತೆಯಲ್ಲಿ ಗುದ್ದಲಿ ಪೂಜೆ ನಡೆಸಿದ್ದರು. ಅಲ್ಲದೆ, ಬಹುಕಾಲದ ಕಾಲೊನಿ ನಿವಾಸಿಗಳ ಬೇಡಿಕೆ ಈಡೇರಲಿದೆ ಎಂದು ಕಾಲೊನಿ ನಿವಾಸಿಗಳಲ್ಲಿ ವಿಶ್ವಾಸ ತುಂಬಿದ್ದರು.

ಆದರೆ, ಇದೀಗ ಈ ಕಾಲೊನಿ ರಸ್ತೆಯನ್ನು ಅಭಿವೃದ್ದಿ ಮಾಡುವುದನ್ನು ಬಿಟ್ಟು ಕಜೆ ಎಂಬಲ್ಲಿಂದ ಕಾಮಗಾರಿ ಆರಂಭಿಸುವ ಯೋಜನೆ ರೂಪಿಸಿರುವುದು ಕಾಲೊನಿ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Edited By : Manjunath H D
Kshetra Samachara

Kshetra Samachara

21/10/2020 08:47 pm

Cinque Terre

34.61 K

Cinque Terre

0

ಸಂಬಂಧಿತ ಸುದ್ದಿ