ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಕೆಂಚನಕೆರೆ ಅಂಗರಗುಡ್ಡೆ ಹೆದ್ದಾರಿ ಬದಿ ತ್ಯಾಜ್ಯ ಎಸೆಯುತ್ತಿರುವವ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ

ಮುಲ್ಕಿ: ಕಿನ್ನಿಗೋಳಿ - ಮುಲ್ಕಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ಅಂಗರಗುಡ್ಡೆ ತಿರುವಿನಲ್ಲಿ ಸ್ಕೂಟರ್ ನಲ್ಲಿ ಬಂದು ಅಕ್ರಮವಾಗಿ ತ್ಯಾಜ್ಯ ಎಸೆಯುತ್ತಿದ್ದ ವ್ಯಕ್ತಿಯೋರ್ವನನ್ನು ಅತಿಕಾರಿ ಬೆಟ್ಟು ಗ್ರಾಪಂ ಮಾಜಿ ಸದಸ್ಯ ಜೀವನ್ ಶೆಟ್ಟಿ ರೆಡ್ ಹ್ಯಾಂಡಾಗಿ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಳಿ ಬಣ್ಣದ ಸ್ಕೂಟರ್ ನಲ್ಲಿ ಬಂದ ವ್ಯಕ್ತಿಯೋರ್ವ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ತ್ಯಾಜ್ಯ ಎಸೆಯುತ್ತಿರುವುದನ್ನು ಕಂಡ ಜೀವನ ಶೆಟ್ಟಿ, ಕೂಡಲೇ ಸ್ಥಳಕ್ಕೆ ಧಾವಿಸಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಎಸೆದ ತ್ಯಾಜ್ಯವನ್ನು ಆತನಿಂದಲೇ ಸ್ವಚ್ಛ ಮಾಡಿಸಿ ಆತನಿಗೆ ಬುದ್ಧಿವಾದ ಹೇಳಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕಿಲ್ಪಾಡಿ ಪಂಚಾಯತ್ ವ್ಯಾಪ್ತಿಯ ಅಂಗರಗುಡ್ಡೆಯಿಂದ ಕೆಂಚನಕೆರೆ ಮುಲ್ಕಿ ಹೋಗುವ ರಸ್ತೆ ಬದಿ ಕೆಲವು ದುಷ್ಕರ್ಮಿಗಳು ತ್ಯಾಜ್ಯ ಎಸೆದಿದ್ದು, ಅನೇಕ ಬಾರಿ ಈ ಭಾಗದ ಸಂಘ ಸಂಸ್ಥೆಗಳು ಸ್ವಚ್ಛವಾಗಿಸಿತ್ತು.

ಅಲ್ಲದೆ, ಪಂಚಾಯತ್ ಜಾಗೃತಿ ಮೂಡಿಸುವ ಬ್ಯಾನರ್ ಕೂಡ ಅಳವಡಿಸಲಾಗಿತ್ತು. ತ್ಯಾಜ್ಯ ಬಿಸಾಡುವ ಬಗ್ಗೆ ಹಲವಾರು ಬಾರಿ ಗ್ರಾಮಸಭೆಯಲ್ಲಿ ಪ್ರಸ್ತಾಪವಾಗಿದ್ದು, ಪಬ್ಲಿಕ್ ನೆಕ್ಸ್ಟ್ ಸಹಿತ ಅನೇಕ ಮಾಧ್ಯಮಗಳಲ್ಲಿ ವರದಿಯಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರೂ ಕೆಲ ದುಷ್ಕರ್ಮಿಗಳು ಮತ್ತೆ ತ್ಯಾಜ್ಯ ಎಸೆದು ಸ್ಥಳದಲ್ಲಿ ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಸಿದ್ದರು.

ಇದೀಗ ತ್ಯಾಜ್ಯ ಎಸೆದಾತನ ಪತ್ತೆಯಾಗಿದ್ದು, ಕೂಡಲೇ ಮುಲ್ಕಿ ಪೊಲೀಸರು ಹಾಗೂ ಕಿಲ್ಪಾಡಿ ಪಂಚಾಯತ್, ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By :
Kshetra Samachara

Kshetra Samachara

09/10/2020 10:57 pm

Cinque Terre

12.43 K

Cinque Terre

0

ಸಂಬಂಧಿತ ಸುದ್ದಿ