This is a modal window.
Beginning of dialog window. Escape will cancel and close the window.
End of dialog window.
ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿಗೆ ಸಮೀಪದ ಕಾರ್ನಾಡ್ ಬೈಪಾಸ್ ಬಳಿಯ ಯುವಕನೋರ್ವ ದೃಷ್ಟಿ ದೋಷವಿದ್ದರೂ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪಾಸಾಗಿದ್ದು ಪ್ರತಿಷ್ಠಿತ ಯೂನಿಯಾನ್ ಬ್ಯಾಂಕ್ ನಲ್ಲಿ ಕರ್ತವ್ಯ ನಿರ್ವಹಿಸಲು ಕರೆ ಬಂದಿದ್ದು ಸಾಧನೆಗೆ ಪ್ರತಿಫಲ ದೊರಕಿದೆ
ಈತನ ಹೆಸರು ಧನ್ ರಾಜ್ ಪೂಜಾರಿ, ಯುವಕನಿಗೆ ಎಳವೆಯಿಂದಲೇ ಶೇ 95ರಷ್ಟು ದೃಷ್ಟಿ ದೋಷ ಉಂಟಾಗಿದ್ದು ಸಮಸ್ಯೆಗೊಳಗಾಗಿದ್ದರೂ ಈತನಲ್ಲಿರುವ ಛಲ ಮಾತ್ರ ಈತನ ಯಶಸ್ಸಿಗೆ ಕಾರಣವಾಗಿದೆ.
ಬಾಲ್ಯದಲ್ಲಿ ದೃಷ್ಟಿ ದೋಷವೆಂದು ಧೃತಿಗೆಡದೆ ಕಾರ್ನಾಡ್ ಸಿ.ಎಸ್.ಐ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಮತ್ತು ಸರಕಾರಿ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಮುಗಿಸಿ ನಂತರ ಬೆಂಗಳೂರಿನಲ್ಲಿ ಡಿಗ್ರಿ ಮತ್ತು ಕಂಪ್ಯೂಟರ್ ಶಿಕ್ಷಣ ಪಡೆದು ಕಂಪನಿಯೊಂದರಲ್ಲಿ ಕೆಲಸಕ್ಕಿದ್ದ ಯುವಕ ಮುಂದಕ್ಕೆ ಬ್ಯಾಕಿಂಗ್ ಪರೀಕ್ಷೆಯಲ್ಲಿ ಪಾಸಾಗಿ ಇದೀಗ ಯೂನಿಯನ್ ಬ್ಯಾಂಕ್‌ನಲ್ಲಿ ಟ್ರೈನೀ ಮೂಲಕ ಕರ್ತವ್ಯಕ್ಕೆ ಹಾಜರಾಗಿದ್ದಾನೆ.
ವಿಶೇಷವೆಂದರೆ ಬಾಲ್ಯದಿಂದಲೂ ಸ್ನೇಹಿತರ ಸಹಾಯದಿಂದ ಓದು ಬರಹದಲ್ಲಿ ತೊಡಗಿಕೊಂಡ ಈತ ಎನ್.ವಿ.ಡಿ.ಎ ಸ್ವಾಫ್ಟ್‌ವೇರ್ ಸಹಾಯದಿಂದ ಸಾಮಾಜಿಕ ಜಾಲತಾಣಗಳಲ್ಲಿ, ಅಥವಾ ಇನ್ನಿತರ ವಿಷಯಗಳಲ್ಲಿ ಮುಂದಿದ್ದಾರೆ. ಬಾಲ್ಯದಲ್ಲಿ ದಿನದಿಂದ ದಿನಕ್ಕೆ ಕಣ್ಣಿನ ಸಮಸ್ಯೆ ಹೆಚ್ಚಾದರೂ ಈತನ ಛಲ ಕಡಿಮೆಯಾಗಿಲ್ಲ. ಕಣ್ಣು ಕಾಣದಿದ್ದರೂ ಮತ್ತಷ್ಟು ಸಾಧನೆ ಮಾಡಬೆಂಬ ಛಲ ಇನ್ನೂ ಕಡಿಮೆ ಆಗಿಲ್ಲ. ಏನೇ ಆಗಲಿ ಇವರ ಈ ಸಾಧನೆಯನ್ನು ಮೆಚ್ಚಲೇ ಬೇಕು.
ಪುನೀತ್ ಕೃಷ್ಣ, ಪಬ್ಲಿಕ್ ನೆಕ್ಸ್ಟ್, ಮುಲ್ಕಿ
PublicNext
12/10/2022 08:45 am