ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರೆ: ಪಾಳು ಬಾವಿಯಲ್ಲಿ ವಿವಾಹಿತೆಯ ಮೃತದೇಹ ಪತ್ತೆ

ಪಡುಬಿದ್ರಿ: ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಳು ಬಿದ್ದ ಬಾವಿಯೊಂದರಲ್ಲಿ ವಿವಾಹಿತ ಮಹಿಳೆಯ ಮೃತದೇಹ ಸಿಕ್ಕಿದ್ದು ಹಲವು ಅನುಮಾನಗಳಿಗೆ ಎಡಮಾಡಿಕೊಟ್ಟಿದೆ.

ರಕ್ಷಿತಾ (24) ಎಂಬ ಮಹಿಳೆಯ ಮೃತದೇಹ ಇದಾಗಿದ್ದು, ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾಪು ಫ್ಯಾನ್ಸಿ ಅಂಗಡಿಯಲ್ಲಿ ಉದ್ಯೋಗದಲ್ಲಿದ್ದ ರಕ್ಷಿತಾ ತನ್ನ ಸಹೋದ್ಯೋಗಿ ಸಂಜಯ್ ಆಚಾರ್ ಎಂಬವರೊಂದಿಗೆ 2020ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಈಕೆ ಹಾಗೂ ಪತಿಯ ನಡುವೆ ವಿರಸವುಂಟಾಗಿತ್ತು. ರಕ್ಷಿತಾ ಮಂಗಳವಾರದಿಂದ ಮನೆಯಿಂದ ನಾಪತ್ತೆಯಾಗಿದ್ದರು. ಪೊಲೀಸರಿಗೆ ರಕ್ಷಿತಾರ ಸಂಬಂಧಿ ಶಕುಂತಳಾ ಎಂಬುವರು ನೀಡಿದ ದೂರಿನಲ್ಲಿ ಗಂಡನ ವಿರುದ್ಧ ಸಂಶಯವಿರುವುದಾಗಿ ತಿಳಿಸಲಾಗಿದೆ.

Edited By : Somashekar
PublicNext

PublicNext

10/10/2022 12:31 pm

Cinque Terre

49.31 K

Cinque Terre

1

ಸಂಬಂಧಿತ ಸುದ್ದಿ