ಉಡುಪಿ: ಬೀರೂರಿನಿಂದ 20 ಕಿಲೋ ಮೀಟರ್ ದೂರದಲ್ಲಿರುವ ಯಗಟಿಪುರ ಎಂಬ ಗ್ರಾಮದಲ್ಲಿ 14 ವರ್ಷದ ಶ್ರೀ ವತ್ಸ ಎಂಬ ಬಾಲಕ ಯಗಟಿ ಡ್ಯಾಮಿನಲ್ಲಿ ಮೂರು ದಿನಗಳ ಹಿಂದೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದು ಮೂರು ದಿನಗಳ ಕಾಲ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಸಿಕ್ಕಿರಲಿಲ್ಲ.
ಯಗಟಿಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಶಶಿಕುಮಾರ್ ಅವರು ಈಶ್ವರ್ ಮಲ್ಪೆ ಅವರನ್ನು ಸಂಪರ್ಕಿಸಿದಾಗ ಆಪತ್ಬಾಂಧವ ಈಶ್ವರ್ ಮಲ್ಪೆ ಅವರು ತಕ್ಷಣ ಬೀರೂರಿಗೆ ತೆರಳಿ ಸುಮಾರು 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸುಮಾರು 2 ಕಿಲೋಮೀಟರ್ ದೂರದಲ್ಲಿ ಮೃತ ದೇಹವನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.ಅವರ ಮಾನವೀಯ ಸಹಾಯಕ್ಕಾಗಿ ಯಗಟಿಪುರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
Kshetra Samachara
27/09/2022 07:09 pm