ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿರಿಯ ಸಹಕಾರಿ ಪಿ.ಬಿ.ದಿವಾಕರ ರೈ ಅವರಿಗೆ ಗಾಂಧಿ ಸ್ಮೃತಿ ಪ್ರಶಸ್ತಿ

ಸುಳ್ಯ:ಸುಳ್ಯ ಯುವಜನ ಸಂಯುಕ್ತ ಮಂಡಳಿ ಹಾಗು ಯುವಜನ ಸೇವಾ ಸಂಸ್ಥೆ ವತಿಯಿಂದ ನೀಡುವ ಗಾಂಧಿಸ್ಮೃತಿ ಪ್ರಶಸ್ತಿಗೆ ಹಿರಿಯ ಸಹಕಾರಿ ಪಿ.ಬಿ.ದಿವಾಕರ ರೈ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಹೇಳಿದ್ದಾರೆ.

ಯುವಜನ ಸಂಯುಕ್ತ ಮಂಡಳಿ ಸಭಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರುವಿವರ ನೀಡಿದರು.2020ರಲ್ಲಿ ಗೋಪಾಲಕೃಷ್ಣ ಶ್ಯಾನುಭಾಗ್, 2021ರಲ್ಲಿ ಎಸ್.ಎಂ.ಬಾಪೂ ಸಾಹೇಬ್ ಅವರಿಗೆ ಪ್ರಶಸ್ತಿ ನೀಡಲಾಗಿತ್ತು. 2022 ರ ಗಾಂಧಿ ಸ್ಮೃತಿ ಪ್ರಶಸ್ತಿಯನ್ನು ಹಿರಿಯ ಸಮಾಜಸೇವಕ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಪಿ.ಬಿ. ದಿವಾಕರ ರೈ ಯವರಿಗೆ ಪ್ರದಾನ ಮಾಡಿ ಗೌರವಿಸಲಿದ್ದೇವೆ.

ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿನದಂದು ಯುವಜನ ಸಂಯುಕ್ತ ಮಂಡಳಿ ಸಭಾ ಭವನದಲ್ಲಿ ನಡೆಯಲಿದೆ 3ನೇ ವರ್ಷದ ಗಾಂಧಿ ಜಯಂತಿ ಆಚರಣೆ ಮತ್ತು ‘ ಗಾಂಧಿಸ್ಮೃತಿ ‘ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಚಿಂತನೆ ಹಾಗೂ ದುಡಿಮೆ ಇಂದಿಗೂ ಪ್ರಸ್ತುತ. ನಮ್ಮ ಬದುಕಿಗೆ ಆದರ್ಶವಾಗಿದ್ದು , ಇದನ್ನು ಆಗಾಗ ನೆನಪಿಸುವುದು ಅರ್ಥಪೂರ್ಣವೆಂದೂ ತಿಳಿದು ನಮ್ಮ ಸಂಸ್ಥೆಯ ವತಿಯಿಂದ 2020 ರಿಂದ ಈ ಕಾರ್ಯಕ್ರಮವನ್ನು ಏರ್ಪಡಿಸುತ್ತದೆ.ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಇವರು ಉದ್ಘಾಟಿಸಿ, ಗಾಂಧಿ ಸ್ಮೃತಿ ‘ ಪ್ರಶಸ್ತಿಯನ್ನು ಪ್ರದಾನ ಮಾಡುವರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್ . ಗಂಗಾಧರ ಅವರು ಗಾಂಧಿ ಚಿಂತನೆಯ ಕುರಿತು ಮಾತನಾಡಲಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

24/09/2022 10:34 pm

Cinque Terre

3.85 K

Cinque Terre

0