ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಬ್ಬರ್ ಬೋರ್ಡ್ ಸದಸ್ಯರಾಗಿ‌ ಮುಳಿಯ ಕೇಶವ ಭಟ್ ನಾಮನಿರ್ದೇಶನ

ಸುಳ್ಯ: ಕೇಂದ್ರ ಸರಕಾರದ ವಾಣೀಜ್ಯ ಸಚಿವಾಲಯದ ಅಧೀನದಲ್ಲಿರುವ ಕೋಟ್ಟಯಂನ ರಬ್ಬರ್ ಬೋರ್ಡ್ ಸದಸ್ಯರಾಗಿ ಮುಳಿಯ ಕೇಶವ ಭಟ್ ನಾಮನಿರ್ದೇಶನಗೊಂಡಿದ್ದಾರೆ. ಸಂಸದರು, ಐಎಎಸ್ ಅಧಿಕಾರಿಗಳು, ನಾಮ ನಿರ್ದೇಶಿತ ಸದಸ್ಯರನ್ನು ಒಳಗೊಂಡಿರುವ ರಬ್ಬರ್ ಬೋರ್ಡ್‌ಗೆ ಕರ್ನಾಟಕದಿಂದ ಸಂಸದ ನಳಿನ್‌ಕುಮಾರ್ ಕಟೀಲ್ ಹಾಗು ಮುಳಿಯ ಕೇಶವ ಭಟ್ ಸದಸ್ಯರಾಗಿರುತ್ತಾರೆ. ಮೂರು ವರ್ಷದ ಅವಧಿಗೆ ಮುಳಿಯ ಕೇಶವ ಭಟ್ ನಾಮನಿರ್ದೇಶನಗೊಂಡಿದ್ದಾರೆ.

ಸುಳ್ಯ ತಾಲೂಕು ಪಂಚಾಯತ್ ಮಾಜಿ‌ ಅಧ್ಯಕ್ಷರಾಗಿದ್ದ ಮುಳಿಯ ಕೇಶವ ಭಟ್ ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಸಹಕಾರಿ ಸಂಘದ ನಿರ್ದೇಶಕರಾಗಿ, ಗುತ್ತಿಗಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ಜಿಲ್ಲಾ ಸಮಿತಿಯ ಪ್ರಧಾನ ಮುಳಿಯ ಕೇಶವ ಭಟ್, ಸುಳ್ಯ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸೇರಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ರಬ್ಬರ್ ಬೋರ್ಡ್ ರಬ್ಬರ್‌ ಬೆಳೆಗಾರರ ಮತ್ತು ಹಾಗೂ ರಬ್ಬರ್‌ ಬೆಳೆ ಅಭಿವೃದ್ಧಿಯ ದೃಷ್ಠಿಯಿಂದ ಕಾರ್ಯಾಚರಿಸುವ ಸಂಸ್ಥೆಯಾಗಿದೆ.

Edited By : Nirmala Aralikatti
Kshetra Samachara

Kshetra Samachara

23/09/2022 10:23 pm

Cinque Terre

3.33 K

Cinque Terre

0

ಸಂಬಂಧಿತ ಸುದ್ದಿ