ಉಡುಪಿ: ತೆಂಗಿನ ಚಿಪ್ಪನ್ನು ಬಳಸಿ ಅದ್ಭುತ ಕಲಾಕೃತಿ ರಚಿಸುವ ಕಲಾವಿದ ಉಡುಪಿ ಅಲೆವೂರಿನಲ್ಲಿರುವ ವೆಂಕಟರಮಣ ಭಟ್ ಸಂಕಷ್ಟದಲ್ಲಿದ್ದಾರೆ. ಬಳಸಿ ಎಸೆಯುವ ತೆಂಗಿನ ಚಿಪ್ಪುವಿನಲ್ಲಿ ಕಲಾ ಸೃಷ್ಟಿಯ ಕುಶಲತೆಯನ್ನ ರೂಡಿಸಿಕೊಂಡು ಹೊಸ ಕಲಾಸೃಷ್ಠಿಯನ್ನು ಮಾಡಿದವರು ವೆಂಕಟರಮಣ ಭಟ್.
ಗಣಪತಿ , ರಾಘವೇಂದ್ರ ಸ್ವಾಮಿ , ಆದಿ ಶಂಕರಾಚಾರ್ಯ, ಮಧ್ವಾಚಾರ್ಯ , ವಾದಿರಾಜ ಸ್ವಾಮಿ , ಏಸುಕ್ರಿಸ್ತ ,ಶಾಕುಂತಳೆ , ವಿವೇಕಾನಂದ ,ಮಾಹಾತ್ಮಾಗಾಂಧಿ ಮುಂತಾದ ಅನೇಕ ಕಲಾಕೃತಿಗಳು ಇವರಿಂದ ಜೀವ ತಳೆದಿವೆ.
4 ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿದ 74 ವರ್ಷದ ಭಟ್ಟರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು ಉಡುಪಿ ಬಳಿಯ ಅಲೆವೂರಿನಲ್ಲಿ ಪತ್ನಿ ವಿಜಯ ಭಟ್ ರೊಂದಿಗೆ ಬಂಧುಗಳ ಮನೆಯೊಂದರಲ್ಲಿ ನೆಲೆಸಿದ್ದಾರೆ.
ಆರ್ಥಿಕವಾಗಿ ತೀರಾ ಕಂಗೆಟ್ಟಿರುವ ಇಳಿ ವಯಸ್ಸಿನ ಸ್ವಾಭಿಮಾನಿ ಭಟ್ಟರಿಗೆ ಸರಕಾರ ಮತ್ತು ,ಸಂಘ ಸಂಸ್ಥೆಗಳು ಆರ್ಥಿಕವಾಗಿ ನೆರವಾಗುವ ಕಾರ್ಯ ಮಾಡಬೇಕಾಗಿದೆ.
ಕಲಾವಿದ ವೆಂಕಟರಮಣ ಭಟ್ ಸಂಪರ್ಕ ಸಂಖ್ಯೆ: 9945955170
PublicNext
22/09/2022 09:40 pm