ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಇಳಿ ವಯಸ್ಸಿನಲ್ಲೂ ಸ್ವಾಭಿಮಾನದ ಜೀವನ: ಎರಡು ಗ್ರಾಮಗಳ ಸೇತುಕೊಂಡಿಯಾಗಿರುವ ಕರೀಂ ಬ್ಯಾರಿ

ಇವರು ಕರೀಂ ಬ್ಯಾರಿ. ಊರವರ ನೆಚ್ಚಿನ‌ ಕರೀಮಾಕ. ವಯಸ್ಸು 95. ಈ ಇಳಿ ವಯಸ್ಸಿನಲ್ಲೂ ಇವರು ದುಡಿಯುತ್ತಾರೆ.

ಮಂಗಳೂರು: ಇವರೊಬ್ಬರು ಸ್ವಾಭಿಮಾನಿ ಶ್ರಮಜೀವಿ. ತನ್ನ ಇಳೀ ವಯಸ್ಸಿನಲ್ಲೂ ತಾನೇ ಸಂಪಾದಿಸಿ ಜೀವನ ನಡೆಸುತ್ತಿದ್ದಾರೆ. ಪೊಳಲಿ ಸಮೀಪದ ಅಡ್ಡೂರು ಎಂಬಲ್ಲಿನ ಫಲ್ಗುಣಿ ನದಿಯಲ್ಲಿ ಅಂಬಿಗನಾಗಿ ಕೆಲಸ ನಿರ್ವಹಿಸುತ್ತಿರುವ ಇವರು, ತನ್ನ 30ನೇ ವರ್ಷದಲ್ಲಿ ಈ ವೃತ್ತಿಯನ್ನು ಆರಂಭಿಸಿದ್ದರು. ಕಳೆದ 65 ವರ್ಷಗಳಿಂದ ಇದೇ ವೃತ್ತಿಯನ್ನು ಮುಂದುವರಿಸುತ್ತಾ ಬಂದಿರುವ ಕರೀಮಾಕನ ಜೀವನೋತ್ಸಾಹ ಮಾತ್ರ ಯುವಕರನ್ನೂ ನಾಚಿಸುವಂತಿದೆ. ನದಿ ನೀರಿನ ಜೊತೆ ಪ್ರಾಣದ ಹಂಗು ತೊರೆದು ಇಂದಿಗೂ ಈ ಕೆಲಸ ಮಾಡಲು ಅವರಿಗಿರುವ ಉತ್ಸಾಹವನ್ನು ಅವರಿಂದಲೇ ಕೇಳಬೇಕು.

ಅಡ್ಡೂರು ಹೊಳೆ ಬದಿಯ ಕಡವು ಪ್ರದೇಶದ ಎರಡು ಗ್ರಾಮಗಳ ಸಂಪರ್ಕ ಕೊಂಡಿಯಾಗಿರುವ ಕರೀಮಾಕ ಅನುಭವದ ಕಣಜ. ಒಂದು ತೀರದಿಂದ ಮತ್ತೊಂದು ತೀರಕ್ಕೆ ಜನರನ್ನು ಸಾಗಿಸುವಾಗ ಹಳೇ ಕಾಲದ ನೆನಪನ್ನು ವಿವರಿಸುತ್ತಾ, ಜನರಿಗೂ ದೋಣಿ ಪ್ರಯಾಣ ಬೋರ್ ಆಗದಂತೆ ಕೊಂಡೊಯ್ಯುತ್ತಾರೆ.

ತುರ್ತು ಸಂದರ್ಭದಲ್ಲಿ ಮಳೆಯೇ ಇರಲಿ, ಬಿಸಿಲೇ ಇರಲಿ, ರಾತ್ರಿಯೇ ಇರಲಿ ಹಗಲೇ ಇರಲಿ. ಕರೀಮಾಕ ಮಾತ್ರ ಸೇವೆಗೆ ಹಾಜರ್. ಇವರ ಅನನ್ಯ ಸೇವೆಯನ್ನು ಜನ ಎಂದಿಗೂ ಮರೆಯುತ್ತಿಲ್ಲ. ದುಡಿಮೆಯ ಜೀವನ ಶೈಲಿ, ಸಾಂಪ್ರದಾಯಿಕ ಆಹಾರ ಪದ್ಧತಿ ಇವೆಲ್ಲವೂ ಕರೀಮಾಕನ ಆರೋಗ್ಯವನ್ನು ಇಂದಿಗೂ ಕಾಯ್ದುಕೊಂಡಿದೆ.ಈ ನಿಟ್ಟಿನಲ್ಲಿ ಗ್ರಾಮದ ಜನತೆಗೆ ಇಂದಿಗೂ ಇವರ ಸೇವೆ ಲಭಿಸುತ್ತಿದೆ.

Edited By : Shivu K
Kshetra Samachara

Kshetra Samachara

20/09/2022 10:17 am

Cinque Terre

25.4 K

Cinque Terre

7

ಸಂಬಂಧಿತ ಸುದ್ದಿ