ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಬಿಎಎಂಎಸ್ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿ ಆತ್ಮಹತ್ಯೆ

ಮಣಿಪಾಲ: ಬಿಎಎಂಎಸ್ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಕಾರಣಕ್ಕೆ ಇಲ್ಲಿನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಪರ್ಕಳ ಸಮೀಪದ ಕಬ್ಯಾಡಿ ಎಂಬಲ್ಲಿ ನಡೆದಿದೆ.ಮೃತರನ್ನು ಕಬ್ಯಾಡಿಯ ಪ್ರಕಾಶ ಕುಲಕರ್ಣಿ ಎಂಬವರ ಮಗ ಪೃಥ್ವಿ ಕುಲಕರ್ಣಿ(24) ಎಂದು ಗುರುತಿಸಲಾಗಿದೆ.

ಬಿ.ಎ.ಎಂ.ಎಸ್ ಪದವಿಯಲ್ಲಿ ಅನುತ್ತೀರ್ಣ ಆಗಿರುವುದರಿಂದ ಸುಮಾರು ಒಂದು ವರ್ಷದಿಂದ ಮಾನಸಿಕವಾಗಿ ಇವರು ನೊಂದಿದ್ದರು ಎನ್ನಲಾಗಿದೆ.ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಪೆಗೊಂಡು ಮನೆಯ ಹಾಲ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

16/09/2022 11:27 am

Cinque Terre

3.93 K

Cinque Terre

1

ಸಂಬಂಧಿತ ಸುದ್ದಿ