ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು : ಅನಾಥನ ಪಾಲಿಗೆ ನೆರವಾದ : ಮುಳುಗು ತಜ್ಞ ಈಶ್ವರ್ ಮಲ್ಪೆ

ಬೈಂದೂರು : ಬೈಂದೂರು ತಾಲೂಕಿನ ಕಂಬದ ಕೋಣೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಸ್ತೆಯ ಬದಿಗೆ ಅನಾಥವಾಗಿ ಬಿದ್ದಿದ ಆಂಧ್ರ ಮೂಲದ ವ್ಯಕ್ತಿಯನ್ನು ಆಪ್ತರಕ್ಷಕ ಮುಳುಗು ತಜ್ಞ ಈಶ್ವರ್ ಮಲ್ಪೆ ಉಡುಪಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಅನಾಥವಾಗಿ ರಸ್ತೆಯ ಬದಿಗೆ ಮಲಗಿದ್ದ ವ್ಯಕ್ತಿಯನ್ನು ಮಾಧ್ಯಮ ಮಿತ್ರರು ಅದ ಜನರ್ಧನ್ ಕೆ ಮರವಂತೆ ನೋಡಿ ವಿಚಾರಿಸಿದಾಗ ಊಟವಿಲ್ಲದೆ ಬಿದ್ದಿರುವುದು ತಿಳಿದು ಕೂಡಲೇ ಆಪತ್ಬಾಂಧವ ಈಶ್ವರ್ ಮಲ್ಪೆ ಹಾಗೂ ಹತ್ತಿರದ ಬೈಂದೂರು ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಈಶ್ವರ್ ಮಲ್ಪೆ ಬಂದು ವ್ಯಕ್ತಿಯನ್ನು ಉಡುಪಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ವೈದ್ಯಕೀಯ ತಪಾಸಣೆಗೆ ಒಳಪಡಿಸುತ್ತಾರೆ.

ಆ ನಂತರ ವ್ಯಕ್ತಿಯ ಬಳಿಯಲ್ಲಿದ್ದ ಚೀಲವನ್ನು ಪರಿಶೀಲಿಸಿದಾಗ ಕೆಲವು ಗುರುತಿನ ಚೀಟಿಗಳು ಸಿಕ್ಕಿದ್ದು ಅದರಲ್ಲಿ ಚೆನ್ನೂರು ನಾಗಾರ್ಜುನ ಆಂಧ್ರ ಮೂಲದ ವ್ಯಕ್ತಿ ಎಂದು ತಿಳಿದುಬಂದಿದೆ.

-ದಾಮೋದರ ಮೊಗವೀರ ನಾಯಕವಾಡಿ

Edited By : Shivu K
Kshetra Samachara

Kshetra Samachara

14/09/2022 10:43 am

Cinque Terre

6.19 K

Cinque Terre

1