ಕುಂದಾಪುರ: ಮೊಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ, ವಿಶ್ವ ಕಲಾ ರತ್ನ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ಶೆಟ್ಟಿ ಬೆಳಗೋಡು ಅನಾರೋಗ್ಯದಿಂದ ಸೋಮವಾರ ನಿಧನರಾದರು.
ತಾಲೂಕಿನಾದ್ಯಂತ ಕ್ರೀಡಾ ಕಮೆಂಟರಿಗಳ ಮೂಲಕ ಪ್ರಸಿದ್ಧರಾಗಿದ್ದ ಪ್ರಕಾಶ್ ಶೆಟ್ಟಿ ಹಲವಾರು ಕ್ರೀಡೋತ್ಸವಗಳನ್ನೂ ಸಂಘಟಿಸಿ ಯಶಸ್ವಿಯಾಗಿದ್ದರು. ಸ್ವತಃ ಕಲಾವಿದರಾಗಿದ್ದ ಪ್ರಕಾಶ್ ಶೆಟ್ಟಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನೂ, ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಿ ಪ್ರಸಿದ್ಧರಾಗಿದ್ದವರು.
ಏಕಪಾತ್ರಾಭಿನಯದ ಮೂಲಕವೇ ಜನಮನ ಗೆದ್ದಿದ್ದ ಪ್ರಕಾಶ್ ಮೇಸ್ಟ್ರು ವಾಲಿಬಾಲ್ ಆಟದ ಕಮೆಂಟರಿಗೆ ಕುಳಿತರೆಂದರೆ ಸ್ಟೇಡಿಯಂ ಸ್ಥಬ್ಧವಾಗುತ್ತಿತ್ತು. ಗ್ರಾಮೀಣ ಭಾಗದ ಮೊಳಹಳ್ಳಿ ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ರಾಜ್ಯಮಟ್ಟದಲ್ಲಿ ಹೆಸರು ತಂದ ಪ್ರಕಾಶ್ ಶೆಟ್ಟಿ ಬೆಳಗೋಡು ಅವರು ಮೊಳಹಳ್ಳಿ ಪ್ರಕಾಶ್ ಮೇಸ್ಟ್ರು ಎಂದೇ ಪ್ರಸಿದ್ಧರಾದವರು. ಅವರ ನಿಧನಕ್ಕೆ ಶಿಕ್ಷಣ ಇಲಾಖೆ ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.
Kshetra Samachara
12/09/2022 10:50 pm