ಬೈಂದೂರು : ರಾಷ್ಟ್ರೀಯ ಹೆದ್ದಾರಿ -66 ರಲ್ಲಿ ಸಿಕ್ಕಿರುವ ಎರಡು ಬ್ಯಾಗಗಳನ್ನು ವಾರಸುದಾರರಿಗೆ ತಲುಪಿಸುವ ಮೂಲಕ ಮುಖ್ಯಶಿಕ್ಷಕರೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ಬೈಂದೂರಿನಲ್ಲಿ ನಡೆದಿದೆ.
ಹೌದು ಬೈಂದೂರಿನ ಕಿರಿಮಂಜೇಶ್ವರ ಶುಭದಾ ಆಂಗ್ಲಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ ನಿನ್ನೆ ಶನಿವಾರ ಎಂದಿನಂತೆ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಮುಗಿಸಿ ತಮ್ಮ ಮನೆಯತ್ತ ಹೋಗುತ್ತಿರುವ ಸಂದರ್ಭದಲ್ಲಿ ನಾಗೂರಿನ ಶ್ರೀ ಆಂಜನೇಯ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಯಂಕಾಲ 5:00 ಗಂಟೆಗೆ ರಸ್ತೆ ಪಕ್ಕದಲ್ಲಿ ಬಿದ್ದಿರುವ ಎರಡು ದೊಡ್ಡಗಾತ್ರದ ಬ್ಯಾಗಗಳನ್ನು ಕಂಡು ತಕ್ಷಣ ಬೈಂದೂರಿನ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಪೊಲೀಸನವರ ನಿರ್ದೇಶನದನಂತೆ ತನ್ನ ವಿದ್ಯಾರ್ಥಿಯೊಂದಿಗೆ ತೆರಳಿ ಪೊಲೀಸ್ ಠಾಣೆಗೆ ತಲುಪಿಸಿದ್ದಾರೆ. ಇಂದು ಮುಂಜಾನೆ 9 ಗಂಟೆಗೆ ಗೋವಾದಿಂದ ವಾಪಸ್ ಕೇರಳಕ್ಕೆ ಹೋಗುವಾಗ ಕೇರಳದ ಕಣ್ಣಾನುರಿನ ಮುಹಮ್ಮದ್ ಸಿ ಕೆ ತಮ್ಮ ಕಾರಿನಿಂದ ಬೀಳಿಸಿಕೊಂಡ ಬ್ಯಾಗನ್ನು ಬೈಂದೂರಿನ ಪೊಲೀಸ್ ಠಾಣೆಯಿಂದ ಪಡೆದು . ನಮ್ಮ ಅಜಾಗರೂಕತೆಯಿಂದ ಕಾರಿನಿಂದ ಬಿದ್ದು ಕಳೆದುಹೋದ ಎರಡು ಬ್ಯಾಗನ್ನು ತಲುಪಿಸಿದ ಶುಭದಾ ಶಾಲೆಯ ಮುಖ್ಯಶಿಕ್ಷಕರ ಪ್ರಾಮಾಣಿಕತೆಯನ್ನು ಪ್ರಶಂಸಿಸಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಶಿಕ್ಷಕರ ಈ ಮಾನವೀಯತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kshetra Samachara
11/09/2022 07:19 pm