ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ವಿಭಿನ್ನವೇಷ ಧರಿಸಿ ಸೇವಾ ಮನೋಭಾವ ಯೋಜನೆಯ ಹಣ ಹಸ್ತಾಂತರ

ವರದಿ: ಪುನೀತ್ ಕೃಷ್ಣ, ಮುಲ್ಕಿ

ಮುಲ್ಕಿ: ಮುಲ್ಕಿ ಸಮೀಪದ ಎಸ್‌ವಿಟಿ ಗೆಳೆಯರ ಸಹಕಾರದೊಂದಿಗೆ ಸದಸ್ಯರಾದ ದೇವರಾಜ್ ದೇವಾಡಿಗ ಅವರು ವಿಭಿನ್ನವೇಷ ವೇಷ ಧರಿಸಿ ಸೇವಾ ಮನೋಭಾವನೆ ಮೆರೆದು ಮಾಸ್ಟರ್ ಆರವ್, ಬೇಬಿ ಶ್ರೀಯ ಹಾಗೂ ಮೋಹನ್ ಶೆಟ್ಟಿಯವರ ಚಿಕಿತ್ಸೆಗೆ ದಾನಿಗಳ ಮುಖಾಂತರ ಸುಮಾರು 2,10,000 (ಎರಡು ಲಕ್ಷ ಹತ್ತು ಸಾವಿರ ರೂ.) ಧನಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಮುಡಬಿದ್ರೆ ನಿವಾಸಿ 1 ವರ್ಷ 5 ತಿಂಗಳು ಪ್ರಾಯದ ಶ್ರೀಯಾ ಎಂಬ ಮಗು ರಕ್ತದ ಸೋಂಕಿನಿಂದ ನರಳುತ್ತಿದ್ದು, ಪಕ್ಷಿಕೆರೆಯ ನಿವಾಸಿ ಎಳೆಯ ವಯಸ್ಸಿನ ಮಗನಾದ ಆರವ್ ಮಗುವು ಅಪರೂಪದ ಕಾಯಿಲೆ ಕರೋಲಿ ರೋಗದಿಂದ ಬಳಲುತ್ತಿದೆ. ಕಿನ್ನಿಗೋಳಿ ಸಮೀಪದ ಕಿಲೆಂಜೂರು ಗ್ರಾಮದ ಅತ್ತೂರು ಹೊಸಮನೆ ಮೋಹನ್ ಶೆಟ್ಟಿ ಇಲಿ ಜ್ವರದ ಪರಿಣಾಮ ತನ್ನ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು, ಮೂವರ ಚಿಕಿತ್ಸೆಗಾಗಿ ಕಾರ್ಯಪ್ರವೃತ್ತರಾದ ಎಸ್. ವಿ. ಟಿ. ಗೆಳೆಯರ ಬಳಗದ ಸಹಕಾರದೊಂದಿಗೆ ಸದಸ್ಯರಾದ ದೇವರಾಜ್ ದೇವಾಡಿಗರವರು ವಿಭಿನ್ನ ಶೈಲಿಯ ವೇಷ ಧರಿಸಿ ಹಣ ಸಂಗ್ರಹ ಮಾಡಿದ್ದಾರೆ.

ಮುಲ್ಕಿ ವೆಂಕಟರಮಣ ದೇವಸ್ಥಾನ ದೇವರ ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಚಕ ರಾಜೇಶ್ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಫಲಾನುಭವಿಗಳಾದ ಬೇಬಿ ಶ್ರೀಯಾ ಕುಟುಂಬಕ್ಕೆ 80,000, ಮಾಸ್ಟರ್ ಆರವ್ ಕುಟುಂಬಕ್ಕೆ 80,000 ಹಾಗೂ ಮೋಹನ್ ಶೆಟ್ಟಿ ಅವರ ಕುಟುಂಬಕ್ಕೆ 50,000 ರೂ. ಸಂಗ್ರಹಿಸಿದ ಹಣವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭ ಮುಲ್ಕಿ ನ.ಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಮಾಜಿ ಅಧ್ಯಕ್ಷ ಸುನಿಲ್ ಆಳ್ವ, ಸದಸ್ಯ ಶೈಲೇಶ್, ಎಸ್‌ವಿಟಿ ಗೆಳೆಯರ ಬಳಗದ ರಮನಾಥ್ ಪೈ, ಸುಬ್ರಹ್ಮಣ್ಯ ಶೆಣೈ, ಸತ್ಯೇಂದ್ರ ಶೆಣೈ, ಜನಾರ್ಧನ ಕಿಲೆಂಜೂರು, ಪ್ರಸಾದ್ ಕಾಮತ್ ಕಿರಣ್, ಸುಜಿತ್ ಮತ್ತಿತರರಿದ್ದರು.

Edited By : Shivu K
Kshetra Samachara

Kshetra Samachara

05/09/2022 10:23 pm

Cinque Terre

13.99 K

Cinque Terre

0

ಸಂಬಂಧಿತ ಸುದ್ದಿ