ಮಂಗಳೂರು: ಮೋದಿಯವರ ಕಾರ್ಯಕ್ರಮಕ್ಕೆ ಬಂದಿರುವ ವೇಳೆ ಹೆತ್ತವರ ಕೈತಪ್ಪಿದ ಬಾಲಕಿಯನ್ನು ಮಂಗಳೂರು ಸಂಚಾರ ವಿಭಾಗದ ಎಸಿಪಿ ಆಕೆಯ ಮನೆಗೆ ಕರೆದೊಯ್ದು ಹೆತ್ತವರ ಮಡಿಲು ಸೇರಿಸಿರುವ ಘಟನೆ ಇಂದು ನಡೆದಿದೆ.
ಕಾವೂರು ನಿವಾಸಿ ಯಮನಪ್ಪ ಎಂಬವರ ಪುತ್ರಿ ಪೂಜಾ ಮೇಥಿ ಎಂಬ 10 ವರ್ಷದ ಬಾಲಕಿ ಹೆತ್ತವರೊಂದಿಗೆ ಮೋದಿಯವರ ಕಾರ್ಯಕ್ರಮಕ್ಕೆ ಆಗಮಿಸಿದ್ದಾಳೆ. ಆದರೆ ಜನದಟ್ಟಣೆಯ ಮಧ್ಯೆ ಆಕೆ ತನ್ನ ಹೆತ್ತವರಿಂದ ಬೇರ್ಪಟ್ಟಿದ್ದಾಳೆ. ಪೊಲೀಸ್ ಕೈಗೆ ಸಿಕ್ಕಿದ ಪೂಜಾ ಮೇಥಿಯ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿಯವರು ತಮ್ಮ ಪೊಲೀಸ್ ತಂಡೊಂದಿಗೆ ಆಕೆಯ ಮನೆಗೆ ಕರೆದೊಯ್ದು ಹೆತ್ತವರ ಮಡಿಲು ಸೇರಿಸಿದ್ದಾರೆ. ಎಸಿಪಿ ಗೀತಾ ಕುಲಕರ್ಣಿಯವರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
Kshetra Samachara
02/09/2022 10:02 pm