ಮಂಗಳೂರು: ನಗರದ ಮೀನು ಮಾರುಕಟ್ಟೆಯ ಬಳಿ ಕಳೆದುಹೋಗಿದ್ದ 8ಪವನ್ ಚಿನ್ನದ ಸರವನ್ನು ಮೀನು ಮಾರಾಟದ ಮಹಿಳೆಯರು ವಾರಸುದಾರರಿಗೆ ಮರಳಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ.
ಮಹಿಳೆಯೊಬ್ಬರು ತಮ್ಮ 8ಪವನ್ ನ ಚಿನ್ನದ ಸರವನ್ನು ಮಂಗಳೂರಿನ ಸ್ಟೇಟ್ ಬ್ಯಾಂಕ್‌ನಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಕಳೆದುಕೊಂಡಿದ್ದರು. ಅದು ಮೀನು ಮಾರಾಟದ ಮಹಿಳೆಯೋರ್ವರಿಗೆ ಸಿಕ್ಕಿದೆ. ಅವರು ಅದನ್ನು ತೆಗೆದಿಟ್ಟಿದ್ದರು. ವಾರಸುದಾರರು ಹುಡುಕಾಟ ನಡೆಸುತ್ತಿರುವುದು ತಿಳಿದು ಮೀನುಗಾರ ಮಹಿಳೆ ಅವರಿಗೆ ಚಿನ್ನದ ಸರವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಎರಡು ದಿನಗಳ ಬಳಿಕ ತನ್ನ ಚಿನ್ನದ ಸರ ಮರಳಿ ದೊರಕಿದ್ದರಿಂದ ಮಹಿಳೆಯ ಸಂತೋಷಕ್ಕೆ ಪಾರವೇ ಇಲ್ಲ. ಮಹಿಳೆ ಹಾಗೂ ಆಕೆಯ ಪತಿ ಪ್ರಾಮಾಣಿಕತೆ ಮೆರೆದು ಮರಳಿ ಸರವನ್ನು ನೀಡಿದ ಮೀನುಗಾರ ಮಹಿಳೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
PublicNext
27/08/2022 12:43 pm