ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಬಸ್ಸಲ್ಲಿ ಪ್ರಯಾಣಿಸಿದ್ದೇ ಜೀವಕ್ಕೆ ಮುಳುವಾಯಿತು: ಬೆನ್ನುಮೂಳೆ ಮುರಿದು ಆಸ್ಪತ್ರೆಗೆ ದಾಖಲಾದ ಯುವಕ

ಸುಳ್ಯ: ಸುಳ್ಯ ತಾಲೂಕಿನ ಬೆಳ್ಳಾರೆಯ ವ್ಯಕ್ತಿಯೊರ್ವರು ಸರಕಾರಿ ಬಸ್ಸಲ್ಲಿ ಸಂಚರಿಸುವಾಗ ಬಸ್ ರಸ್ತೆಯಲ್ಲಿ ಇದ್ದ ಹೊಂಡಕ್ಕೆ ಬಿದ್ದು ಸೊಂಟ ಮುರಿದು, ಆಸ್ಪತ್ರೆಯಲ್ಲಿ ದಾಖಲಾದ ಘಟನೆ ನಡೆದಿದೆ.

ಬೆಳ್ಳಾರೆಯ ವಿಜಯ ಕುಮಾರ್ ಎಂಬವರು ಸುಳ್ಯದಲ್ಲಿ ಮೊಬೈಲ್ ಅಂಗಡಿ ಇರಿಸಿಕೊಂಡಿದ್ದರು. ಇವರು ಕಾರ್ಯನಿಮಿತ್ತ ಮಂಗಳೂರಿಗೆ ಹೋಗಿ ವಾಪಾಸ್ ಬೆಳ್ಳಾರೆಗೆ ಆಗಮಿಸುತ್ತಿದ್ದರು. ಹೀಗೆ ವಾಪಾಸ್ ಬರುವಾಗ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತು ಬೆಳ್ಳಾರೆಗೆ ಬರುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕ ಬಳಿ ರಸ್ತೆ ಅವ್ಯವಸ್ಥೆಯ ಕಾರಣ ಹಾಗೂ ರಸ್ತೆ ಗುಂಡಿಯಿಂದ ಕೂಡಿದ್ದರಿಂದ ಬಸ್ಸು ರಸ್ತೆಯ ಗುಂಡಿಗೆ ಬಿದ್ದಿದೆ. ಈ ಸಮಯದಲ್ಲಿ ಪ್ರಯಾಣಿಕ ವಿಜಯ ಕುಮಾರ್ ಅವರು ಬಸ್ಸಿನಲ್ಲಿ ಎತ್ತಿ ಹಾಕಿದ ಅನುಭವಾಗಿ ದೇಹದಲ್ಲಿ ಸೊಂಟದಿಂದ ಕೆಳಭಾಗದ ಸ್ಪರ್ಶಜ್ಞಾನ ಕಳೆದುಕೊಂಡಿದ್ದಾರೆ. ತಕ್ಷಣವೇ ವಿಜಯ್ ಅವರು ಬೊಬ್ಬೆ ಹೊಡೆದ ಬಳಿಕ ಬಸ್ಸು ನಿಲ್ಲಿಸಿದ ಚಾಲಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಸ್ತುತ ವಿಜಯಕುಮಾರ್ ಅವರನ್ನು ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ವಿಜಯಕುಮಾರ್ ಅವರಿಗೆ ಬೆನ್ನುಹುರಿ ಹಾಗೂ ಕುತ್ತಿಗೆ ಸಮೀಪದ ಎಲುಬು ಜಖಂಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ಈಗಾಗಲೇ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು,ಕೂಡಲೇ ರಸ್ತೆಯನ್ನು ಈ ಸ್ಥಿತಿಗೆ ತಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧವೂ ಪ್ರಕರಣ ದಾಖಲಾಗಬೇಕು. ಇನ್ನು ಮುಂದಕ್ಕೆ ತನಗಾದ ಸ್ಥಿತಿ ಇನ್ನೊಬ್ಬರಿಗೆ ಆಗಬಾರದು,ತನಗೆ ಈಗ ಸೊಂಟದಿಂದ ಕೆಳಗಡೆ ಸ್ವಾಧೀನ ಇಲ್ಲ.ಮುಂದಕ್ಕೆ ದುಡಿದು ನನ್ನ ಕುಟುಂಬವನ್ನು ಸಾಕಬಹುದು ಎಂಬ ಭರವಸೆಯೂ ಇಲ್ಲ. ಮುಂದಕ್ಕೆ ನನ್ನ ಮಕ್ಕಳು ಪತ್ನಿ ಸೇರಿದಂತೆ ನನ್ನ ಕುಟುಂಬದ ಸ್ಥಿತಿ ಏನು ಎಂದು ವಿಜಯಕುಮಾರ್ ಅವರು ಹೇಳುತ್ತಿದ್ದಾರೆ.

ಮಾತ್ರವಲ್ಲದೇ ಇತ್ತೀಚಿಗೆ ರಾಷ್ಟ್ರೀಯ ಹೆದ್ದಾರಿ 75ರ ಬಿಕರ್ನಕಟ್ಟೆ ಎಂಬಲ್ಲಿ ರಸ್ತೆಯಲ್ಲಿನ ಗುಂಡಿಯಲ್ಲಿ ನೀರು ತುಂಬಿರೋದು ಗಮನಿಸದೆ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಡಿಕ್ಕಿ ಹೊಡೆದು ಅತೀಶ್ ಎಂಬ ಯುವಕ ಮೃತಪಟ್ಟಿದ್ದ. ಈ ಬಗ್ಗೆ ಅತೀಶ್ ಗೆಳೆಯ ಲಿಖಿತ್ ರೈ ಮಂಗಳೂರು ನಗರ ಪಾಲಿಕೆಯ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿ ಮುಚ್ಚಿಸುವಂತೆ ಏಕಾಂಗಿ ಪ್ರತಿಭಟನೆ ಮಾಡಿದ್ದ.

Edited By : Nagaraj Tulugeri
Kshetra Samachara

Kshetra Samachara

22/08/2022 06:12 pm

Cinque Terre

3.25 K

Cinque Terre

3