ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಧ್ವ ಸಮಾಜದ ವಿದ್ವಾಂಸ ಹಯವದನ ಪುರಾಣಿಕರ ಅಗಲಿಕೆ : ಮಠಾಧೀಶರಿಂದ ಸಂತಾಪ

ಉಡುಪಿ: ಮಾಧ್ವ ಸಮಾಜದ ಮೇರು ವಿದ್ವಾಂಸರಾದ ಹಯವದನ ಪುರಾಣಿಕರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ. ಶ್ರೀವಾದಿರಾಜರ ಲಕ್ಷ್ಮೀ ಶೋಭಾನೆ , ವೈಕುಂಠ ವರ್ಣನೆ ಮೊದಲಾದ ಅನೇಕ ಕೃತಿಗಳಿಗೆ ಕನ್ನಡದಲ್ಲಿ ವ್ಯಾಖ್ಯಾನ ಮಾಡಿ ಮಹದುಪಕಾರ ಮಾಡಿದ್ದಾರೆ. ಶ್ರೀಹರಿಗುರುಗಳು ಅವರಿಗೆ ಸದ್ಗತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಮಠಾಧೀಶರುಗಳು ಸಂತಾಪ ಸೂಚಿಸಿದ್ದಾರೆ.

ಸಾರಸ್ವತ ಪ್ರಪಂಚದಲ್ಲಿ ಎಲ್ಲರ ಗೌರವಾದರಗಳಿಗೆ ಪಾತ್ರರಾದ ಹಾಗೂ ಅಸಂಖ್ಯಾತ ಶಿಷ್ಯ ಸಂಪತ್ತನ್ನು ಹೊಂದಿರುವ ಹಯವದನ ಪುರಾಣಿಕರ ಆತ್ಮಕ್ಕೆ ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರು ಸದ್ಗತಿಯನ್ನು ನೀಡಲಿ ಎಂದು ಮಠಾಧೀಶರು ಪ್ರಾರ್ಥಿಸಿದ್ದಾರೆ.

Edited By : Somashekar
Kshetra Samachara

Kshetra Samachara

16/08/2022 01:06 pm

Cinque Terre

10.22 K

Cinque Terre

0

ಸಂಬಂಧಿತ ಸುದ್ದಿ