ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಸೈಕಲ್ ನಲ್ಲಿ ಬ್ರಹ್ಮಾವರದಿಂದ ಸಿಂಗಪೂರ್ ಗೆ ಹೊರಟ ಹರ್ಷೇಂದ್ರ

ಬ್ರಹ್ಮಾವರ: ಚೇರ್ಕಾಡಿಯ 23 ವರ್ಷದ ಹರ್ಷೆಂದ್ರ ಈ ಹಿಂದೆ ಬ್ರಹ್ಮಾವರದಿಂದ ಜಮ್ಮು ಕಾಶ್ಮೀರಕ್ಕೆ 2,700 ಕಿ.ಮೀ ಕಾಲು ನಡಿಗೆಯಿಂದ ಹೋಗಿ ತುಳುನಾಡ ಜಾನಪದ ಕಲೆ ಹುಲಿಕುಣಿತವನ್ನು ಮಾಡಿ ಬಂದವನು.ಇಂದು ಬ್ರಹ್ಮಾವರದಿಂದ ಸಿಂಗಪೂರ್ ಗೆ ಸೈಕಲಿನಲ್ಲಿ ಪ್ರಯಾಣ ಆರಂಭಿಸಿದ್ದಾರೆ.

ಬ್ರಹ್ಮಾವರ ಬಂಟರ ಸಂಘದ ಬಳಿ ಉಡುಪಿ ಶಾಸಕ ಕೆ ರಘುಪತಿ ಭಟ್ ಸೈಕಲ್ ಯಾತ್ರೆಗೆ ಭಾರತ ರಾಷ್ಟ್ರ ಧ್ವಜ ನೀಡಿ ಚಾಲನೇ ನೀಡಿ ಶುಭ ಹಾರೈಸಿದರು.

ಕೇರಳದವರೆಗೆವ ರೈಲಿನಲ್ಲಿ ಹೋಗಿ ಆಬಳಿಕ ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 1ರಲ್ಲಿ ನೇಪಾಳ್ ಬಳಿಕ ಭುತಾನ್ , ಥೈಲ್ಯಾಂಡ್, ಮಲೇಷ್ಯಯಾ ಮೂಲಕ ಸಿಂಗಾಪುರ್ ತಲುಪಲಿದ್ದಾರೆ .

11,000 ಕಿ.ಮೀ ದೂರವನ್ನು ಒಟ್ಟು 6 ತಿಂಗಳಲ್ಲಿ ಕ್ರಮಿಸಲಿದ್ದಾರೆ. ಪ್ರಪಂಚದ ಪರಿಸರ ಕಲುಷಿತ ನಿವಾರಣೆ ಮತ್ತು ತ್ಯಾಜ್ಯ ಮುಕ್ತ ಜನ ಜಾಗೃತಿ ಮೂಡಿಸಲು ಈ ಜಾಥಾವನ್ನು ಹಮ್ಮಿಕೊಂಡಿದ್ದೇನೆ ಎನ್ನುತ್ತಾರೆ ಸಿವಿಲ್ ಡಿಪ್ಲೋಮಾ ಇಂಜಿನಿಯರಿಂಗ್ ಪಧವೀಧರ ಹರ್ಷೇಂದ್ರ.ಚೇರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಖಾ ಭಟ್, ರೈಡರ್ ಅಶೋಶೀಯೇಶನ್‍ನ ಗಿರಿಧರ, ವೀಣಾ ನಾಯಕ್, ಕಮಲಾಕ್ಷ ಹೆಬ್ಬಾರ್, ಶಿಕ್ಷಕ ಶ್ರೀಕಾಂತ್ ಸಾಮಂತ್, ಈತನ ತಾಯಿ ಯಶೋಧ, ಈತನೀಗೆ ಸೈಕಲ್ ನೀಡಿದ ಅಲನ್ ವಾಝ್ ಮತ್ತು ಅನೇಕ ಹಿತೈಸಿಗಳು ಹಾಜರಿದ್ದು ಶುಭ ಹಾರೈಸಿದರು.

Edited By : Manjunath H D
PublicNext

PublicNext

16/08/2022 09:29 am

Cinque Terre

46.82 K

Cinque Terre

2

ಸಂಬಂಧಿತ ಸುದ್ದಿ