ಕುಂದಾಪುರ: ಬೈಕ್ ನಲ್ಲಿ ಪತಿಯೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ದನ ಅಡ್ಡ ಬಂದು ಬೈಕ್ ಸ್ಕಿಡ್ ಅಗಿ ಬಿದ್ದ ಪರಿಣಾಮ ಶಿಕ್ಷಕಿಯೊಬ್ವರು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ವಂಡ್ಸೆ ಸಮೀಪದ ಚಿತ್ತೂರು ಎಂಬಲ್ಲಿ ಈ ಘಟನೆ ಸಂಭವಿಸಿದ್ದು ಶಿಕ್ಷಕಿ ಅಂಬಿಕಾ ಮೃತಪಟ್ಟಿದ್ದಾರೆ.ಇವರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೆಮ್ಮಾಡಿಯಲ್ಲಿ ಶಿಕ್ಷಕಿಯಾಗಿದ್ದರು.
ಗುರುವಾರ ಬೆಳಿಗ್ಗೆ ಹೆಮ್ಮಾಡಿ ಶಾಲೆಗೆ ತೆರಳುವಾಗ ವಂಡ್ಸೆ ಗ್ರಾಮದ ರಾಜೇಶ್ವರಿ ಕಾಂಪ್ಲೆಕ್ಸ್ ಬಳಿ ದನ ಅಡ್ಡ ಬಂದಿದೆ. ಈ ಸಂದರ್ಭ ಸವಾರ,ಪತಿ ಶ್ರೀಕಾಂತ್ ಬೈಕಿಗೆ ಬ್ರೇಕ್ ಹಾಕಿದಾಗ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ಪತಿ ಶ್ರೀಕಾಂತ್ ನಾವುಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಅಂಬಿಕಾ ಒಂದೂವರೆ ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾರೆ.
Kshetra Samachara
12/08/2022 03:43 pm