ಬೈಂದೂರು: ಇಲ್ಲೊಬ್ಬರು ತನ್ನ ಕೈಯಲ್ಲಿ ಅಧಿಕಾರವಿದ್ದರೂ ಅಹಂ ಪಡದೆ, ತನ್ನ ಸೇವಾ ಕೈಂಕರ್ಯದಿಂದಲೇ ಜನಮನ ಗೆದ್ದಿದ್ದಾರೆ.
ಹೌದು... ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಮರವಂತೆ ಅಂಗನವಾಡಿ ಕೇಂದ್ರಕ್ಕೆ ಮರವಂತೆ ಗ್ರಾಮ ಪಂಚಾಯಿತಿ ಸದಸ್ಯೆ ಸುಶೀಲಾ ಖಾರ್ವಿ ಯವರು ವರ್ಷಕ್ಕೆ 2-3 ಬಾರಿ ಆಗಮಿಸಿ, ಸ್ವಯಂಸ್ಫೂರ್ತಿಯಿಂದ ಅಂಗನವಾಡಿಯ ಒಳ ಅಂಗಣ ಮತ್ತು ಶಾಲೆಯ ಸುತ್ತಮುತ್ತ ಪರಿಸರವನ್ನು ಕೀಳರಿಮೆ ತೋರದೆ, ತಾನೊಬ್ಬರೇ ಖುಷಿ ಖುಷಿಯಿಂದ ಸ್ವಚ್ಛಗೊಳಿಸುತ್ತಾರೆ. ಬಳಿಕ ಪುಟಾಣಿಗಳೊಂದಿಗೆ ಬೆರೆತು, ಆಟವಾಡಿ ಮಕ್ಕಳಿಗೆ ಉತ್ಸಾಹ-ಚೈತನ್ಯ ತುಂಬುತ್ತಾರೆ.
ಆಗಸ್ಟ್ 15ರ 75ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಅಂಗನವಾಡಿ ಸಜ್ಜುಗೊಂಡಿದ್ದು, ಚಿಣ್ಣರಿಗೆ ದೇಶಾಭಿಮಾನ ಹಾಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿರುವ ಈ ಅಪರೂಪದ ಸರಳ ಮಹಿಳೆಯ ನಿಸ್ವಾರ್ಥ ಸಮಾಜಮುಖಿ ಸೇವೆಗೆ ಊರಿನ ಜನರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಅಂಗನವಾಡಿ ಶಿಕ್ಷಕಿ ಅವರು ಸುಶೀಲಾ ಖಾರ್ವಿಯವರ ಬಗ್ಗೆ ಮಾಧ್ಯಮಕ್ಕೆ ತಿಳಿಸಿದ್ದು ಇಷ್ಟು...
ವರದಿ: ದಾಮೋದರ ಮೊಗವೀರ, ನಾಯಕವಾಡಿ
Kshetra Samachara
11/08/2022 04:59 pm