ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಮರ್ ರಹೇ ಘೋಷಣೆಯೊಂದಿಗೆ ಹಿರಿಯ ಚಿಂತಕ ಜಿ.ರಾಜಶೇಖರ್ ಅಂತ್ಯಕ್ರಿಯೆ

ಉಡುಪಿ:ಜು.20ರ ರಾತ್ರಿ ನಿಧನರಾದ ನಾಡಿನ ಹಿರಿಯ ಚಿಂತಕ ಜನಪರ ಹೋರಾಟಗಾರ ಜಿ.ರಾಜಶೇಖರ್(75) ಅವರ ಅಂತ್ಯಕ್ರಿಯೆಯನ್ನು ಗುರುವಾರ ಮಧ್ಯಾಹ್ನ ಉಡುಪಿಯ ಬೀಡಿನಗುಡ್ಡೆ ರುಧ್ರಭೂಮಿಯಲ್ಲಿ ಲಾಲ್ ಸಲಾಂ, ಜೈ ಭೀಮ್, ಅಮರ್ ರಹೇ ಘೋಷಣೆಯೊಂದಿಗೆ ನೆರವೇರಿಸಲಾಯಿತು.

ನಗರದ ಮಿಷನ್ ಕಂಪೌಂಡ್ ಸಮೀಪದ ಕರ್ಕಡ ಕಂಪೌಂಡ್‌ನಲ್ಲಿರುವ ಜಿ.ರಾಜಶೇಖರ್ ಪತ್ನಿಯ ತಂಗಿ ಕೆ.ಸುಲೋಚನಾ ಭಟ್ ಅವರ ಮನೆಯಲ್ಲಿ ಬೆಳಗ್ಗೆ 8:30ರಿಂದ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ನೂರಾರು ಗಣ್ಯರು, ಅಭಿಮಾನಿಗಳು, ಬಂಧುಗಳು, ಸಾರ್ವಜನಿಕರು ಪಡೆದರು. ಬಳಿಕ ಮಧ್ಯಾಹ್ನ 12 ಗಂಟೆಗೆ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಪ್ರಾರ್ಥಿವ ಶರೀರವನ್ನಿಟ್ಟು ನುಡಿನಮನ ಸಲ್ಲಿಸಲಾಯಿತು.

ಜನಪರ ಹೋರಾಟಗಾರ ಕೆ.ಎಲ್.ಅಶೋಕ್, ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್, ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್, ನಗರಸಭೆ ಸದಸ್ಯ ರಮೇಶ್ ಕಾಂಚನ್‌, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟೀಪಳ್ಳ, ಕೆಪಿಸಿಸಿ ಪ್ಯಾನೆಲಿಸ್ಟ್ ವರೋನಿಕಾ ಕರ್ನೆಲಿಯೋ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಇದ್ರೀಸ್ ಹೂಡೆ, ಪ್ರೊ.ಹಯವದನ ಉಪಾಧ್ಯಾಯ, ಅದಮಾರು ಶ್ರೀಪತಿ ಆಚಾರ್ಯ, ಪತ್ರಕರ್ತ ಶಶಿಧರ್ ಹೆಮ್ಮಾಡಿ, ಸಾಹಿತಿ ವಸಂತ ಬನ್ನಾಡಿ ನುಡಿನಮನ ಸಲ್ಲಿಸಿದರು.

Edited By : PublicNext Desk
PublicNext

PublicNext

21/07/2022 09:15 pm

Cinque Terre

44.13 K

Cinque Terre

3

ಸಂಬಂಧಿತ ಸುದ್ದಿ